ಬ್ರಹ್ಮಾವರದ ಬೈಕಾಡಿ ಗಾಂಧಿನಗರದಲ್ಲಿ ಪುತ್ರನೋರ್ವ ತನ್ನ ಹೆತ್ತವರನ್ನೇ ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.
ಶಾಹಿದ್ ಆಲಿ (31) ಹತ್ಯೆ ಆರೋಪಿಯಾಗಿದ್ದು, ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಹೆತ್ತವರೊಂದಿಗೆ ಜಗಳವಾಡಿದ ಬಳಿಕ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
