BREAKING
ಭಕ್ತಿ ಪಥ

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ: ರಾಜ್ಯ ಕಾರ್ಯಕಾರಿಣಿ ಸಭೆ

 

ಶಬರಿಮಲೆ  ಅಯ್ಯಪ್ಪ ಸೇವಾ ಸಮಾಜಂ  ಇದರ ರಾಜ್ಯ ಕಾರ್ಯಕಾರಿಣಿ ಸಭೆಯು ದಿನಾಂಕ 25/08/2024 ನೇ ಆದಿತ್ಯವಾರ ಬೆಳಿಗ್ಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ ದಲ್ಲಿ ರಾಜ್ಯಾಧ್ಯಕ್ಷರಾದ ಡಾ ಜಯರಾಮ್ ಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ಟಿ ಬಿ ಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷರಾದ ಶ್ರೀ ರಾಧಾಕೃಷ್ಣ ಮೆಂಡನ್ ಸ್ವಾಗತಿಸಿದರು.


ವೇದಿಕೆಯಲ್ಲಿ ಸಾಸ್ ಉಡುಪಿ ಜಿಲ್ಲಾ ಗೌರವಧ್ಯಕ್ಷರಾದ ಶ್ರೀಯುತ ಹರಿಯಪ್ಪ ಕೋಟ್ಯಾನ್ ಗೌರವ ಸಲಹೆಗಾರರಾದ ಶ್ರೀ ಆನಂದ್ ಪಿ ಸುವರ್ಣ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ ಕೋಟ್ಯಾನ್ ಸಾಸ್ ದಕ್ಷಿಣ ಪ್ರಾಂತಿಯ ಕಾರ್ಯದರ್ಶಿ ಕೃಷ್ಣಯ್ಯಜಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಶ್ರೀ ಎನ್ ಎಮ್ ಹೆಗ್ಡೆ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ಮಹಿಳಾ ಸಾಸ್ ಜಿಲ್ಲಾಧ್ಯಕ್ಷೆ ತಾರಾ ಯು ಆಚಾರ್ಯ ಸಾಸ್ ಕಾಪು ತಾಲೂಕ್ ಅಧ್ಯಕ್ಷ ಶ್ರೀ ರಘುರಾಮ್ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀ ಗಣೇಶ್ ಪೊದುವಾಲ್ ಉಪಸ್ಥಿತರಿದ್ದರು. 


ಸಾಸ್ ಸದಸ್ಯರು ಸೇವಾ ಮನೋಭಾವನೆ ಯಿಂದ  ಬೇರೆ ಬೇರೆ ರಾಜ್ಯದಿಂದ ಬರುವ ಮಾಲಾದಾರಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕು.


ಸ್ವಚ್ಛ ಶಬರಿಮಲೆ ಕರೆ ನೀಡಿದ ಸಂದರ್ಭದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ಗುರುಸ್ವಾಮಿಗಳು ಮತ್ತು ಮಾಲಾಧಾರಿ ಗಳು ಹಿಂದಿನಿಂದಲೂ ನಡೆದುಕೊಂಡು ಬಂದ ವೃತ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರ ರಾಗ ಬೇಕು.


ಇರುಮುಡಿಯಲ್ಲಿ ಪ್ಲಾಸ್ಟಿಕ್ ಬಳಸದಂತೆ ಹಾಗೂ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಘಟನೆಯಲ್ಲಿ ಸೇರಿ ಕೊಳ್ಳುವ ಮೂಲಕ ಅಯ್ಯಪ್ಪ ಧರ್ಮ ರಕ್ಷಣಾ ಕಾರ್ಯದಲ್ಲಿ ತೊದಗಿಸಿಕೊಳ್ಳ ಬೇಕೆಂದು ಕರೆ ನೀಡಲಾಯಿತು.


 ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯಿಂದ ಎಲ್ಲಾ ತಾಲೂಕಿನಿಂದ ಪದಾಧಿಕಾರಿಗಳು ಮತ್ತು ಮಹಿಳಾ ಸಾಸ್ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ವಿಜಯ ಕೊಡವೂರು ಪ್ರಾಸ್ತಾವಿಕವಾಗಿ ಮಾತಾಡಿದರು ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ವಂದಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!