BREAKING
ಸುದ್ದಿ

ಉಡುಪಿಯಲ್ಲಿ ತಾಯಿ, ಮೂರು ವರ್ಷದ ಮಗು ನಾಪತ್ತೆ

ಉಡುಪಿ : ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ 29 ವರ್ಷದ ಮಹಿಳೆಯೊಬ್ಬರು ತಮ್ಮ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದವರನ್ನು ಕಾವ್ಯ (29) ಹಾಗೂ ಅವರ ಮೂರು ವರ್ಷದ ಪುತ್ರ ಶಿವಾಂಶ್ ಎಂದು ಗುರುತಿಸಲಾಗಿದೆ.

ಪೊಲೀಸ್ ಪ್ರಕಟಣೆಯ ಪ್ರಕಾರ, ಮೂಲತಃ ನಾಸಿಕ್‌ನಿಂದ ಬಂದಿದ್ದ ಕಾವ್ಯ ಮತ್ತು ಮಗುವನ್ನು ಮೆಣಸೆಯಲ್ಲಿರುವ ಅವರ ಪತಿ ಯತೀಶ್ವರ ಅವರ ಮನೆಗೆ ಬಿಡಲು ಸಂಬಂಧಿಕರು ಅಕ್ಟೋಬರ್ 23ರಂದು ಬೆಳಿಗ್ಗೆ ಉಡುಪಿಗೆ ಕರೆತಂದಿದ್ದರು. ಬೆಳಿಗ್ಗೆ ಸುಮಾರು 8.30ಕ್ಕೆ ಉಡುಪಿಗೆ ತಲುಪಿದ ಬಳಿಕ ಆಟೋ ರಿಕ್ಷಾದಲ್ಲಿ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಲಗೇಜ್ ಇಳಿಸಿ ನಿಂತಿದ್ದರು.

ಈ ವೇಳೆ ಕಾವ್ಯ ಅವರು, ತಮಗೆ ತಿಂಡಿ ಅಥವಾ ಚಹಾ ಬೇಡವೆಂದೂ, ಜೊತೆಯಲ್ಲಿದ್ದವರು ತಿಂಡಿ ಸೇವಿಸಿ ಬರುವಂತೆಯೂ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಸಂಬಂಧಿಕರು ಹೋಟೆಲ್‌ಗೆ ತೆರಳಿ ಬೆಳಿಗ್ಗೆ ಸುಮಾರು 9.15ಕ್ಕೆ ವಾಪಸ್ ಬಂದಾಗ ಕಾವ್ಯ ಮತ್ತು ಮಗು ಸ್ಥಳದಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಮತ್ತು ಮಗುವಿನ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾವ್ಯ ಅವರು ಸುಮಾರು 4 ಅಡಿ 10 ಇಂಚು ಎತ್ತರವಿದ್ದು, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ನಾಪತ್ತೆಯಾಗುವ ವೇಳೆ ಹಳದಿ ಬಣ್ಣದ ಹೂಗಳಿರುವ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ, ತುಳು ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ. ಕಾವ್ಯ ಮತ್ತು ಮಗು ಶಿವಾಂಶ್ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ 0820-2520444, ಉಡುಪಿ ಕಂಟ್ರೋಲ್ ರೂಂ 0820-2526444, ಪೊಲೀಸ್ ನಿರೀಕ್ಷಕರು 9480805408 ಅಥವಾ ಪೊಲೀಸ್ ಉಪನಿರೀಕ್ಷಕರು 9080805445 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!