09/05/25 ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮೂರು ವಾರಗಳ ಕಾಲ ನಡೆದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭವು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ಸ್ವಾಗತ ಅಂಕಣದಲ್ಲಿ ಡಾ.ಕೆ.ಎಸ್.ಕಾರಂತರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ತದನಂತರ ಊರ ಪರವೂರ ಪೋಷಕರು, ಸಾರ್ವಜನಿಕ ಬಂಧುಗಳು, ಗ್ರಾಮ ಮೊಕ್ತೇಸರ ವೃಂದ, ಕೂಟ ಮಹಾಜಗತ್ತಿನ ಸಾಲಿಗ್ರಾಮ ಮತ್ತು ವಿವಿಧ ಅಂಗಸಂಸ್ಥೆಗಳು ಮತ್ತು ಮಹಿಳಾ ಹಾಗು ಯುವ ವೇದಿಕೆಗಳ ಪ್ರಮುಖರು, ದೇವಳದ ಪ್ರಸಕ್ತ ಮತ್ತು ಪೂರ್ವ ಆಡಳಿತ ಮಂಡಳಿಯ ಸದಸ್ಯರನ್ನೊಳಗೊಂಡು ಭಾರತೀಯ ಸೇನೆಯ ಶ್ರೇಯಸ್ಸಿಗಾಗಿ ದುಷ್ಟ ಶಿಕ್ಷಕ ಹಾಗು ಶಿಷ್ಟ ರಕ್ಷಕ ಶ್ರೀ ಗುರು ನರಸಿಂಹ ದೇವರಿಗೆ ಅರ್ಚಕ ಶ್ರೀ ಶ್ರೀನಿವಾಸ ಅಡಿಗರ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಲಾಗುವುದಾಗಿ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.