ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಇದೆ ಮಾರ್ಚ್ ತಿಂಗಳ ಮೂರನೆಯ ತಾರೀಖಿನ ಮಂಗಳವಾರದಂದು ಚಂದ್ರ ಗ್ರಹಣದ ಪ್ರಯುಕ್ತ ಗ್ರಹಣ ಶಾಂತಿಯನ್ನು ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ...
ಪೂರ್ವಾಪಲ್ಗುಣಿ ನಕ್ಷತ್ರದಲ್ಲಿ ಸಿಂಹ ರಾಶಿಯಲ್ಲಿ ಕೇತುಕೃತ ಚಂದ್ರ ಗ್ರಹಣವು ಸಂಭವಿಸಲಿದೆ. ಇದು ಖಗ್ರಾಸವಾಗಿದ್ದರು ಗ್ರಸ್ತೋದಯವಾಗಿ ಕಾಣಿಸುವುದು.
ಮಧ್ಯಾಹ್ನ ನಂತರ ಭೋಜನ ನಿಷಿದ್ಧ.. ಚಂದ್ರೋದಯ ಸಮಯದಲ್ಲಿ ಕೇವಲ ಸುಮಾರು ನಾಲ್ಕು ಕಲೆಯಷ್ಟು ಗ್ರಹಣ ದೃಶ್ಯ ವಾಗುವುದು.
ಈ ಗ್ರಹಣವು ಮಖ, ಹುಬ್ಬ ಉತ್ತರ ಭರಣಿ ಪೂರ್ವಾಷಾಡ ನಕ್ಷತ್ರದವರಿಗೂ, ಸಿಂಹ ಕನ್ಯಾ ಮಕರ ಮೀನ ರಾಶಿಗಳವರೆಗೂ ಇದರಿಂದ ಅನಿಷ್ಟ ಫಲವಿರುವುದು.
ಮಧ್ಯಾಹ್ನ ಗಂಟೆ 3.18ಕ್ಕೆ ಗ್ರಹಣ ಸ್ಪರ್ಶಕಾಲ ಗಂಟೆ 4:32ಕ್ಕೆ ಸಮ್ಮಿಲನವಾಗಿ ಸಂಜೆ ಗಂಟೆ 5:30ಕ್ಕೆ ಗ್ರಹಣ ಮಧ್ಯಕಾಲವಾಗಲಿದೆ. ಗಂಟೆ 5.32ಕ್ಕೆ ಉನ್ ಮ್ಮಿಲನ ಕಾಲವಾಗಿದ್ದು ಸಂಜೆ 6: 48 ನಿಮಿಷಕ್ಕೆ ಗ್ರಹಣ ಮೋಕ್ಷಕಾಲವಾಗಲಿದೆ.
ಗ್ರಹಣ ಕಾಲದಲ್ಲಿ ಅನಿಷ್ಟ ನಿವಾರಣೆಗಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಗ್ರಹಣ ಶಾಂತಿಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಹಣ ಮಧ್ಯಕಾಲದಿಂದ ಈ ಶಾಂತಿಯು ಆರಂಭವಾಗಲಿದ್ದು ಸೂಚಿತ ನಕ್ಷತ್ರ ರಾಶಿಯವರು ಶಾಂತಿಯಲ್ಲಿ ಪಾಲ್ಗೊಳ್ಳಬಹುದು, ಹಾಗೂ ಕ್ಷೇತ್ರದಲ್ಲಿ ಭಜನೆ ಸಂಕೀರ್ತನೆಯನ್ನು ಸಹ ಸಮರ್ಪಿಸಬಹುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

0 ಕಾಮೆಂಟ್‌ಗಳು