ಜೆಸಿಐ ಉಡುಪಿ ಸಿಟಿ ಇದರ ವತಿಯಿಂದ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ ಜ.31ರಂದು ನಡೆಯಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಲ್ಲವಿ ಕೊಡಗು ಅವರು ವಹಿಸಿದ್ದರು. ವೇದಿಕೆಯಲ್ಲಿ ಉದ್ಘಾಟಕರಾದ ತನುಜಾ ಮಾಬೆನ್, ಸಂಪನ್ಮೂಲ ವ್ಯಕ್ತಿಗಳಾದ ಟಿ. ವಿಶ್ವನಾಥ್, ಐಪಿಪಿ ಕಿರಣ್ ಯು. ಭಟ್ ಮತ್ತು ಪ್ರಾಜೆಕ್ಟ್ ಡೈರೆಕ್ಟರ್ ಸೃಜನ್ ಯು. ಶೆಟ್ಟಿ ಅವರು ಉಪಸ್ಥಿತರಿದ್ದರು.
ನಂತರ ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಟಿ. ವಿಶ್ವನಾಥ್ ರವರು ನಾಯಕತ್ವ ಬಗ್ಗೆ ವಿಶೇಷವಾದ ತರಬೇತಿ ನೀಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಕಲಾವಿದ ಕೃಷ್ಣ ಆಚಾರಪಾಡಿ ಮತ್ತು ಟಿ. ವಿಶ್ವನಾಥ್ ಅವರಿಗೆ ಸನ್ಮಾನ ಮಾಡಲಾಯಿತು. ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷರು ವಹಿಸಿಕೊಂಡರು. ಪ್ರಾಜೆಕ್ಟ್ ಇಂಚಾರ್ಜ್ ಜೆಸಿ ಬಾಸುಮ ಕೊಡಗು, ತರಬೇತಿ ವಿಭಾಗದ ಉಪಾಧ್ಯಕ್ಷೆ ಸ್ಮಿತಾ ಪಾಟೀಲ್, ಜೆಜೆಸಿ ಅಧ್ಯಕ್ಷ ಶ್ರೀರಾಜ್ ಆಚಾರ್ಯ, ಮುಂತಾದವರು ಉಪಸ್ಥಿರಿದ್ದರು.

0 ಕಾಮೆಂಟ್‌ಗಳು