ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವ

ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ದಿನಾಂಕ 17 ರಂದು ಮಂಗಳವಾರ ಊರು ಹಾಗೂ ಪರ ಊರ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಅತ್ಯಂತ ಶ್ರದ್ಧಭಕ್ತಿಯಿಂದ ಸಂಪನ್ನಗೊಂಡಿತು.

ಫೆ.14 ರಿಂದ 17 ವರೆಗೆ ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೊರಂಗ್ರಪಾಡಿ ಕೆ.ಪಿ.ಚಂದ್ರಕಾಂತ ತಂತ್ರಿಯವರ ನೇತೃತ್ವದಲ್ಲಿ ವಾರ್ಷಿಕ ಮಹೋತ್ಸವ ನಡೆಯಿತು.

ಫೆ. 17 ರಂದು ಗಣಹೋಮ, ನವಕ ಪ್ರಧಾನ ಹೋಮ, ರಥಾಧಿವಾಸ ಹೋಮ, ಮಹಾಪೂಜೆ, ರಥ ಶುದ್ದಿ., ರಥೋತ್ಸವ, ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಸಂಜೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರ್ಪಳ್ಳಿ ಇವರಿಂದ ಯಕ್ಷಗಾನ – ಪ್ರಸಂಗ "ಕವಿರತ್ನ ಕಾಳಿದಾಸ" ಪ್ರದರ್ಶನಗೊಂಡಿತು.ಬಳಿಕ ಉತ್ಸವ ಬಲಿ, 'ಮಹಾರಥೋತ್ಸವ' ವಿಜೃಂಭಣೆಯಿಂದ ನಡೆಯಿತು

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಂಬಳಮನೆ, ಲಕ್ಷ್ಮೀನಾರಾಯಣ ರಾವ್, ಗರೋಡಿಮನೆ ಶೇಖರ್ ಸುವರ್ಣ, ಪಾಂಡುರಂಗ ನಾಯ್ಕ, ಉಮೇಶ್ ಮಾರ್ಪಳ್ಳಿ, ಶಂಕರ ಆಚಾರ್ಯ, ವಿಜಯಲಕ್ಷ್ಮಿ, ಎಂ ಚಂದ್ರಾವತಿ, ಎಂ ದೇವಳದ ಪರ್ಯಾಯ ಅರ್ಚಕರಾದ ಅನಂತ ಉಪಾಧ್ಯಾಯ ದೇವಸ್ಥಾನ,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ ಗೋಪಾಲಕೃಷ್ಣ ಬಳ್ಳಾಲ್ ಚಿಟ್ಪಾಡಿ ಬೀಡು, ಗೌರವಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ತ್ರಿಷಾ, ಕೋಶಾಧಿಕಾರಿ ಶಂಕರ್ ಜಿ.ದೇವಾಡಿಗ, ನಾಗರಾಜ ಉಪಾಧ್ಯಾಯ ಹಾಗೂ ಜೀರ್ಣೋದ್ಧಾರ ಸಮಿತಿಯ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು