ಭಾರತ ದೇಶದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿಯಂತ್ರಣ (HPV ವ್ಯಾಕ್ಸಿನೇಶನ್ ಕ್ಯಾಂಪೆನ್) ಲಸಿಕೆ ನೀಡುವ ಕಾರ್ಯಕ್ರಮ ಉಡುಪಿ ಬಸ್ ನಿಲ್ದಾಣದ ಬಳಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಅಧಿಕೃತವಾಗಿ ಆರಂಭಿಸಲಾಗುವುದೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಹೆಚ್.ಪಿ.ವಿ ಲಸಿಕಾ ಅಭಿಯಾನವನ್ನು ಫೆ. 28, 2026 ರಂದು ರಾಷ್ಟ್ರದಲ್ಲಿ ಆರಂಭಿಸಲಾಗಿದ್ದು, ಮುಂದಿನ 3 ತಿಂಗಳ ಅವಧಿಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್.ಪಿ.ವಿ ಲಸಿಕೆ ಪಡೆಯಲು ಅವಕಾಶವಿದೆಯೆಂದು ಅವರು ಹೇಳಿದ್ದಾರೆ. ಪ್ರಥಮ ಹಂತದಲ್ಲಿ 14 ವರ್ಷದ ಮೇಲ್ಪಟ್ಟು 15 ವರ್ಷದ ಒಳಗಿನ ಹೆಣ್ಣು ಮಕ್ಕಳು ಅರ್ಹರಿದ್ದು, ಮುಂದಿನ ಹಂತದಲ್ಲಿ ವಯಸ್ಸಿನ ಪರಿಷ್ಕರಣೆ ಆಗಲಿದೆ. ಕೆಲವು ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ಉಪಕರಣಕ್ಕೆ ಕೇಂದ್ರ ಸರ್ಕಾರ 15 ನೇ ಹಣಕಾಸಿನ ನೆರವನ್ನು ಬಳಸಿಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 11,೦೦೦ ಮಂದಿ ವಿದ್ಯಾರ್ಥಿನಿಯರನ್ನು ಪ್ರಥಮ ಹಂತದಲ್ಲಿ ಗುರುತಿಸಲಾಗಿದ್ದು, ನಿಖರವಾಗಿ ಸುಮಾರು 13 ರಿಂದ 14 ಸಾವಿರದವರೆಗೆ ಅರ್ಹ ಹೆಣ್ಣು ಮಕ್ಕಳು ಇರಬಹುದೆಂದು ಅಂದಾಜಿಸಲಾಗಿದೆ. ಹೆಚ್.ಪಿ.ವಿ ವೈರಸ್ ನಿಂದ ಬರಬಹುದಾದ ಗರ್ಭಕಂಠ ಕ್ಯಾನ್ಸರ್ ಇದರಿಂದ ನಿಯಂತ್ರಣವಾಗುವುದಲ್ಲದೇ, ಮಧ್ಯ ವಯಸ್ಸಿನ ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ನಡೆಯಲಿದೆ ಇದರ ಪ್ರಯೋಜನವನ್ನು ಎಲ್ಲಾ ಅರ್ಹ ಹೆಣ್ಣು ಮಕ್ಕಳು ಪಡೆಯಬೇಕೆಂದು ಸಂಸದ ಕೋಟ ತಿಳಿಸಿದ್ದಾರೆ.

0 ಕಾಮೆಂಟ್‌ಗಳು