ರಾಷ್ಟ್ರೀಯ ಬ್ರಾಹ್ಮಣ ಸಮ್ಮೇಳನ ಉದ್ಘಾಟನೆ

ಬ್ರಾಹ್ಮಣರು ನಿತ್ಯವೂ ವಿಶ್ವದ ಶಾಂತಿ ನೆಮ್ಮದಿಯನ್ನು ನಿಸ್ವಾರ್ಥವಾಗಿ ಬಯಸುವರು. ತಮ್ಮ ಪ್ರತಿಯೊಂದು ವೈದಿಕ ಕಾರ್ಯದ ಕೊನೆಯಲ್ಲಿ ಸಮಸ್ತ ಲೋಕವು ಸದಾ ಸುಖವಾಗಿರಲಿ ಎನ್ನುವರು. ಶಿಕ್ಷಣ - ರಾಷ್ಟ್ರ ರಕ್ಷಣೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಅಪಾರವಾದ ಕೊಡುಗೆ ನೀಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಬ್ರಾಹ್ಮಣರು ತಮ್ಮ ಸಂಸ್ಕಾರಗಳನ್ನು ರಕ್ಷಿಸಿಕೊಂಡು ಮುಂದಿನ ಪೀಳಿಗೆಗೂ ತಲುಪಿಸಬೇಕು. ಗಾಯತ್ರಿ-ಗೀತಾ-ವೇದಾಧ್ಯಯನವನ್ನು ತಪ್ಪದೇ ಮಾಡಬೇಕು ಎಂದು ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಕರೆ ನೀಡಿದರು.

ಒರಿಸ್ಸಾದ ಭುವನೇಶ್ವರದಲ್ಲಿ ಒರಿಸ್ಸಾ ಬ್ರಾಹ್ಮಣ ಮಹಾ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಬ್ರಾಹ್ಮಣ ಸಮ್ಮೇಳನವನ್ನು ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಶಿಸುತ್ತಿರುವ ಸಂಸ್ಕಾರಗಳ ಸಂರಕ್ಷಣೆಯ ಬಗ್ಗೆ ವಿಶೇಷ ಉಪದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ಪ್ರೋ.ಸದಾನಂದ ದೀಕ್ಷಿತ್ ಇವರ ನೇತೃತ್ವದಲ್ಲಿ ಆಯ್ಕೆಯಾದ ಒರಿಸ್ಸಾ ಬ್ರಾಹ್ಮಣ ಮಹಾ ಸಂಘದ ನೂತನ ಪದಾಧಿಕಾರಿಗಳಿಗೆ ವಿಶೇಷ ಬೋಧನೆ ಮಾಡಿದರು. ವೇದಿಕೆಯಲ್ಲಿ ರಾಷ್ಟ್ರದ ಅನೇಕ ಭಾಗಗಳಿಂದ ಆಗಮಿಸಿದ ಬ್ರಾಹ್ಮಣ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಪಾದರು ಬ್ರಾಹ್ಮಣ ಭವನದ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು