ಸಿದ್ದಾಪುರ ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆಯು ಅನುಭವ ಮಂಟಪದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಚ್. ಬೋಜ ಶೆಟ್ಟಿ ವಹಿಸಿದ್ದರು. ನಿವೃತ್ತ ಅಂಚೆ ಅಧಿಕಾರಿ ಶ್ರೀ ತೇಜಪ್ಪ ಶೆಟ್ಟಿಯವರು ಮಾತನಾಡಿ ಹಿರಿಯ ನಾಗರಿಕರು ಆರೋಗ್ಯದ ಕಡೆ ವಿಶೇಷ ಗಮನ ಕೊಡಬೇಕು. ಅದಕ್ಕಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಅಂಶಗಳನ್ನು ವಿವರಿಸಿದರು. ವೇದಿಕೆಯ ಕಾರ್ಯದರ್ಶಿ ಶ್ರೀ ದಿನಕರ ತೋಳಾರ್ ಸ್ವಾಗತಿಸಿ ಶ್ರೀ ರಾಜೀವ ಶೆಟ್ಟ ವಂದಿಸಿದರು. ಕಡ್ರಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು