ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ೨೦೨೫-೨೦೨೭ ನೆ ಸಾಲಿನ ವಿದ್ಯಾರ್ಥಿ- ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಎಲ್ಲರನ್ನು ಸ್ವಾಗತಿಸಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಕಾಲೇಜಿನ ಸ್ಥಾಪಕರಾದ ಡಾ ಟಿಎಂಎ ಪೈ ಅವರ ಸಾಧನೆ ಸಿದ್ಧಿಗಳನ್ನು ಪರಿಚಯಿಸುವ ವಿಡಿಯೊ ಪ್ರದರ್ಶಿಸಲಾಯಿತು. ಕಾಲೇಜಿನ ಪರಿಸರ, ವಿವಿಧ ಅಧ್ಯಯನ ವಿಷಯಗಳು, ಪ್ರಾಯೋಗಿಕ ಚಟುವಟಿಕೆಗಳು, ಮೌಲ್ಯಮಾಪನ ಕ್ರಮ, ಸಹಪಠ್ಯ ಚಟುವಟಿಕೆಗಳು ಮತ್ತು ಎರಡು ವರ್ಷಗಳ ವ್ಯಾಸಂಗಾವಧಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಶ್ರೀಮತಿಯರಾದ ಧನಲಕ್ಷ್ಮಿ, ಉಷಾ.ಎಚ್, ಮಮತಾ ಸಾಮಂತ್, ಸೀತಮ್ಮ ಮತ್ತು ಕಲ್ಪನಾ ಶಯನ ಮಾಹಿತಿ ನೀಡಿದರು. ಗ್ರಂಥಪಾಲಕರಾದ ಶ್ರೀ ವಿಜಯಕುಮಾರ್ ಗ್ರಂಥಾಲಯದ ಬಗ್ಗೆ ಮಾಹಿತಿ ಒದಗಿಸಿದರು. ವಿದ್ಯಾರ್ಥಿ ಶಿಕ್ಷಕರು ಗ್ರಂಥಾಲಯಕ್ಕೆ ಭೇಟಿ ನೀಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯ ಕಂಡಿತು.

0 ಕಾಮೆಂಟ್‌ಗಳು