BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಭಕ್ತಿ ಪಥ

ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ- ಏಪ್ರಿಲ್ 29ರಿಂದ ಮೇ 2 ಪ್ರತಿಷ್ಠ ವರ್ಧಂತಿ ಮಹೋತ್ಸವ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 20ನೇ ವಾರ್ಷಿಕ ಪ್ರತಿಷ್ಠ ವರ್ಧಂತಿ ಮಹೋತ್ಸವವು ಇದೆ ಎಪ್ರಿಲ್ ತಿಂಗಳ ತಾರೀಕು 29ರ ಮಂಗಳವಾರ ಮೊದಲ್ಕೊಂಡು ಮೇ ತಿಂಗಳ ತಾರೀಕು ಎರಡರ ಶನಿವಾರ ತನಕ ಪಂಚ ವಿಂಶತಿ ದ್ರವ್ಯ ಮೀಳಿತ ಅಷ್ಟೋತ್ತರ ಶತಬ್ರಹ್ಮ ಕುಂಭಾಭಿಷೇಕ ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ಪ್ರಸನ್ನ ಪೂಜೆ ಶ್ರೀರಂಗ ಪೂಜೆ, ಶ್ರೀ ಚಂಡಿಕಾ ಯಾಗ ಹಾಗೂ ನಿರಂತರ ಮಹಾ ಅನ್ನ ಸಂತರ್ಪಣೆಯೊಂದಿಗೆ ನೆರವೇರಲಿರುವುದು.

ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ ತಂತ್ರಿ ವೇದಮೂರ್ತಿ ವಿಕ್ಯಾತ್ ಭಟ್ ಹಾಗೂ ಗಣೇಶ ಸರಳಳಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನೆರವೇರಲಿರುವುದು.

ತಾರೀಕು 28ರ ಮಂಗಳವಾರ ಸಂಜೆ ಗಂಟೆ 6 ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ ತೋರಣ ಮುಹೂರ್ತ ಉಗ್ರಾಣ ಮುಹೂರ್ತ ತರಕಾರಿ ಮುಹೂರ್ತ ಸಪ್ತಶುದ್ಧಿ ಪ್ರಸಾದ ಶುದ್ದಿ ವಾಸ್ತು ರಾಕ್ಷೋಗ್ನದಿ ಪ್ರಕ್ರಿಯೆಗಳು ಪ್ರಕಾರ ಬಲಿ, ಹಾಗೂ ತಾರೀಕು 29ರ ಬುಧವಾರ ಬೆಳಿಗ್ಗೆ ಗಂಟೆ ಏಳರಿಂದ ಸ್ವಸ್ತಿ ಪುಣ್ಯಾಹವಾಚನ ಆಚಾರ್ಯದಿ ಋತ್ವಿಕ್ ವರ್ಣ, ಸಫರಿವಾರ ದೇವರುಗಳಿಗೆ ನವಕ ಪ್ರಧಾನ ಅಧಿವಾಸ ಹೋಮಗಳು ಕಲಶಾದಿವಾಸ ಕಲಶಾ ಅಭಿಷೇಕ ಪ್ರಸನ್ನ ಪೂಜೆ ತಾರೀಕು 30ರ ಗುರುವಾರ ಬೆಳಿಗ್ಗೆ ಗಂಟೆ 8 ರಿಂದ ಶ್ರೀ ಗಾಯತ್ರಿ ಧ್ಯಾನ ನಪೀಠದಲ್ಲಿರುವ ಪಂಚಮುಖಿ ಗಾಯತ್ರಿ ದೇವಿಗೆ ಪಂಚವಿ oಶತಿ ಕಲಶಾಭಿಷೇಕ ಶ್ರೀ ನಾಗದೇವರ ಸಾನಿಧ್ಯದ ಪ್ರತಿಷ್ಠ ವರ್ಧಂತಿ ಮಹೋತ್ಸವ ಪಂಚವಿ oಶತಿ ಕಲಶಾರಾಧನೆ ಸುಬ್ರಮಣ್ಯ ಸ್ವಾಮಿಗೆ ಪವಮಾನ ಸೂಕ್ತ ಯಾಗ ಕಲಶಾ ಅಭಿಷೇಕ ಕಾಮದೇನು ಸಹಿತ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶ ಅಭಿಷೇಕ ಪರಿವಾರ ದೇವರು ಗಳಿಗೆ ಸ್ನಪನ ಕಲಶಾ ಅಭಿಷೇಕ, ಆಶ್ಲೇಷ ಬಲಿದಾನ ವಟು ಆರಾಧನೆ ಪರಿವಾರ ಪೂಜೆ ಪ್ರಸನ್ನ ಪೂಜೆ ಹಾಗೂ ಸಂಜೆ ಗಂಟೆ ಆರರಿಂದ ಬ್ರಹ್ಮ ಕಲಶ ಮಂಡಲ ರಚನೆ ಭುವನೇಶ್ವರಿ ಪೂಜೆ ಬ್ರಹ್ಮ ಕಲಶಾದಿವಾಸ ಅಧಿವಾಸ ಹೋಮ.

ತಾರೀಕು ಒಂದು ಶುಕ್ರವಾರ ಬೆಳಗ್ಗೆ ಗಂಟೆ ಆರರಿಂದ ಸ್ವಸ್ತಿ ಪುಣ್ಯಾಹವಾಚನ ಪಂಚಾಮೃತ ಅಭಿಷೇಕ ಬೆಳ್ಳಿಗ್ಗೆ ಗಂಟೆ ಹತ್ತು ಐದಕ್ಕೆ ಒದಗುವ ಮಿಥುನ ಲಗ್ನ ಸುಮೂರ್ತದಲ್ಲಿ ಶ್ರೀ ಚಕ್ರ ಪೀಠ ಸುರಪೂಜಿತೆಗೆ ಪಂಚವಿ oಶತಿ ದ್ರವ್ಯ ಮೀಳಿತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ, ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 6:30 ರಿಂದ ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ಪ್ರಸನ್ನ ಪೂಜೆ ಅಷ್ಟಾವಧಾನ ಸೇವೆ ಶ್ರೀ ಆರಾಧನಾ ರಂಗ ಪೂಜಾ ಮಹೋತ್ಸವ ರಾತ್ರಿ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ತಾರೀಕು ಎರಡರ ಶನಿವಾರ ಬೆಳಿಗ್ಗೆ ಗಂಟೆ 8 ರಿಂದ ಶ್ರೀ ಚಂಡಿಕಾಯಾಗ, ಮಹಾ ಸಂಪ್ರೋಕ್ಷಣೆ ಬ್ರಾಹ್ಮಣ ಸುಹಾಸಿನಿ ಆರಾಧನೆ ಆಚಾರ್ಯ ದಂಪತಿ ಕನ್ನಿಕಾ ಪೂಜೆ ಶ್ರೀ ಮಹಾ ಮಂತ್ರಾಕ್ಷತೆ ಹಾಗೂ ಮಹಾ ಅನ್ನಸಂತರ್ಪಣೆ ಸಂಪನ್ನಗೊಳ್ಳಲಿರುವುದು ಹಾಗೂ ದಿನಂಪ್ರತಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು ತಾರೀಕು ಮೂವತ್ತರ ಸಂಜೆ ಶಾರದಾ ನಾಟ್ಯಾಲಯ ಬೆಳಗಾವಿ ಕುಮಾರಿ ಶಾಂತಲಾ ಉದೋಷಿ ಹಾಗೂ ಕುಮಾರಿ ಶ್ರೇಯ ಉದೋಶಿ ಅವರಿಂದ ವಿಶೇಷ ಮನೋರಂಜನ ಕಾರ್ಯಕ್ರಮ ನೆರವೇರಲಿರುವುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!