ಒಟ್ಟು ಹತ್ತು ದಿನಗಳ ಕಾಲ ನಡೆಯಲಿರುವ ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾಂಸರಾದ ವೇದವ್ಯಾಸ ಪುರಾಣಿಕ ಡಾ। ಸುನಿಲ್ ಆಚಾರ್ಯ, ಕೆ ವಿ ರಮಣಾಚಾರ್ಯ, ವಿಕ್ರಮ್ ಕುಂಟಾರ್, ಸಮರ್ಥ ಜೋಷಿ, ರಾಘವೇಂದ್ರ ಆಚಾರ್ಯ, ರಾಘವೇಂದ್ರ ಭಟ್, ವಿ| ಉಷಾ ಹೆಬ್ಬಾರ್, ಸರಸ್ವತಮ್ಮ, ಸರೋಜಕ್ಕ, ಸುಮಿತ್ರ ಕೆರೆಮಠ ಮತ್ತಿತರರು ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಹಬ್ಬ ಹರಿದಿನಗಳು ಎನ್ನುವ ವಿಚಾರವದಲ್ಲಿ ಯುಗಾದಿ, ನಾಗರ ಪಂಚಮಿ, ಚೌತಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ನರಸಿಂಹ ಜಯಂತಿ, ತುಳಸೀಪೂಜೆ-ದೀಪಾವಳಿ-ಗೋಪೂಜೆ ಸಹಿತ ಕಾರ್ತಿಕ ಮಾಸ, ಗೀತಾ ಜಯಂತಿ, ಏಕಾದಶಿ ಮುಂತಾದ ಪರ್ವ ದಿನಗಳ ಕುರಿತಂತೆ ವಿದ್ವಾಂಸರಿಂದ ಪ್ರವಚನ ಏರ್ಪಡಿಸಲಾಗಿದೆ. ವಿದ್ವಾಂಸರಾದ ಮಹಾ ಮಹೋಪಾಧ್ಯಾಯ ಶತಾವಧಾನಿ ಡಾ। ಉಡುಪಿ ರಾಮನಾಥ ಆಚಾರ್ಯ, ವಿ। ಸಗ್ರಿ ಆನಂದತೀರ್ಥ ಉಪಾಧ್ಯಾಯ, ವಿ| ಷಣ್ಮುಖ ಹೆಬ್ಬಾರ್, ಡಾ. ಸುನಿಲ್ ಆಚಾರ್ಯ, ವಿ। ಸುಧೀಂದ್ರ ಆಚಾರ್ಯ ಮುಂತಾದವರು ಹಬ್ಬಗಳ ಆಚರಣೆಗಳ ವಿಧಿ-ವಿಧಾನಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 4 ರಿಂದ 5 ರವರೆಗೆ ನಡೆಯುವ ಈ ವಿಶೇಷ ಉಪನ್ಯಾಸದಲ್ಲಿ ಶಿಬಿರಾರ್ಥಿಗಳಲ್ಲದೆ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಇದರೊಂದಿಗೆ ಸಾಧಕ-ಸಂವಾದ ಎನ್ನುವ ಇನ್ನೊಂದು ಅವಧಿಯನ್ನು ಸಂಜೆ 5 ರಿಂದ 5:45 ರವರೆಗೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರ ಜೊತೆ ಮುಖಾಮುಖಿ ಪ್ರಶ್ನೋತ್ತರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಡಾ. ಶ್ರುತಿ ಬಲ್ಲಾಳ್, ಡಾ। ಎಂ. ಮೋಹನ ಆಳ್ವ, ಡಾ। ರಾಮಕೃಷ್ಣ ಆಜಾರ್, ಡಾ। ಬಿ. ಗೋಪಾಲಾಚಾರ್ಯ, ಡಾ ವಿಜಯೇಂದ್ರ ವಸಂತ್, ಡಾ। ಸುಧೀರ್ ರಾಜ್, ಶ್ರೀ ವಾದಿರಾಜ, ಶ್ರೀ ರತ್ನಾಕರ ಇಂದ್ರಾಳಿ ಮುಂತಾದ ಸಾಧಕರು ವಿವಿಧ ವಿಚಾರಗಳ ಕುರಿತಂತೆ ಮಾಹಿತಿ ನೀಡಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಏಪ್ರಿಲ್ 30ರಂದು ಹಿರಿಯಡ್ಕದಲ್ಲಿರುವ ಶ್ರೀ ಪುತ್ತಿಗೆ ಮೂಲಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9880835626 ಅಥವಾ 8792158946 ಅಥವಾ 9663891702 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

0 ಕಾಮೆಂಟ್‌ಗಳು