ರೋಟರಿ ಕ್ಲಬ್ ಬಾರ್ಕೂರು ವತಿಯಿಂದ ಯುಗಾದಿ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ 37ಕ್ಕೂ ಅಧಿಕ ವರ್ಷಗಳ ಕಾಲ ಬ್ರಹ್ಮಾವರದಲ್ಲಿ ಸೌಂದರ್ಯ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಜಾತ ಶೆಟ್ಟಿ ಅಡ್ಯಂತಾಯ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ರೊ. ಶ್ರೀಮತಿ ಕಿಶೋರಿ ಎಸ್ ಶೆಟ್ಟಿ ಅವರು ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಅಜಿತ್ ಶೆಟ್ಟಿ, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಶ್ರೀಮತಿ ಕಿರಣ ಶೆಟ್ಟಿ ಹಾಗೂ ಕಾರ್ಯದರ್ಶಿ ಸುದರ್ಶನ ಉಡುಪ ಮತ್ತಿತರರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು