ಉಡುಪಿಯ ಮಲ್ಪೆ ಶ್ರೀ ವಡಬಾಂಡೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಧ್ವಜಾರೋಹಣವು ನಡೆಯಿತು. ಈ ಸಂಬಂಧ ದೇವರಿಗೆ ಪುಣ್ಯಾಹ ಕಳಶ ಪೂಜೆಯನ್ನು ಮಾಡಿ, ಧ್ವಜಸ್ತಂಭದಲ್ಲಿ ಧ್ವಜಾರೋಹಣವನ್ನು ಮಾಡುವುದರ ಮೂಲಕ ಸಂಪ್ರದಾಯದಂತೆ ವಿದ್ಯುಕ್ತವಾಗಿ ರಥೋತ್ಸವಕ್ಕೆ ದೇವತೆಗಳಿಗೆ ಆಹ್ವಾನವನ್ನು ನೀಡಲಾಯಿತು. ನಂತರ ಧ್ವಜಸ್ತಂಭಕ್ಕೆ ಕಾಲಶಾಭಿಷೇಕವನ್ನು ಮಾಡಿ ಆರತಿಯನ್ನು ಮಾಡಿದರು. ಈ ಎಲ್ಲಾ ಧಾರ್ಮಿಕ ಕಾರ್ಯಗಳು ದೇವಾಲಯದ ಪ್ರಧಾನ ತಂತ್ರಗಳಾದ ಮನೋಹರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ದೇವಾಲಯದ ಆಡಳಿತ ಮುಖ್ಯಸ್ಥರಾದ ಶ್ರೀನಿವಾಸ ಭಟ್, ಶಶಿಧರ ಅಮೀನ್, ನಾಗರಾಜ ಮೂಲಿಗಾರ್, ಶ್ರೀವರ ಭಟ್ ಮೊದಲಾದವರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು