ಪೂರ್ಣಪ್ರಜ್ಞ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

ರಾಮಾಯಣದ ಪ್ರತಿಯೊಂದು ವಿಚಾರಗಳನ್ನು ಗಮನಿಸಿದಾಗ, ಶ್ರೀ ರಾಮನೇ ಮೊದಲಾದವರ ವ್ಯಕ್ತಿತ್ವ ವನ್ನು ಅವಲೋಕಿಸಿದಾಗ ರಾಮಾಯಣವು ಎಷ್ಟು ಮೌಲ್ಯಯುತವಾಗಿದೆ ಎಂದು ತಿಳಿಯುತ್ತದೆ. ಶ್ರೀ ರಾಮ, ಸೀತಾ, ಹನುಮಂತ, ದಶರಥ, ಜಟಾಯು , ಶಬರಿ, ಗುಹ ಇವೇ ಮೊದಲಾದವರ ಜೀವನ ಕ್ರಮ ನೋಡಿದರೆ ಅವರಲ್ಲಿರುವ ಗುಣ ಮೌಲ್ಯ ಕಾಣಸಿಗುತ್ತದೆ. ಇಂತಹ ರಾಮಾಯಣದ ಅಧ್ಯಯನ ಅತ್ಯಗತ್ಯ ಎಂದು ಶೃಂಗೇರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ವೆಂಕಟರಮಣ ಭಟ್ ಇವರು ದಿನಾಂಕ 4-4-2026ರಂದು ಉಡುಪಿಯ ಪೂರ್ಣಪ್ರಜ್ಞ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿತ ನುಡಿದರು.

ಸಂಸ್ಕೃತ ವಿಭಾಗಾಧ್ಯಕ್ಷರಾದ ಡಾ| ರಮೇಶ ಟಿ. ಎಸ್ ಇವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕ ದಾ. ಆನಂದ ಆಚಾರ್ಯ ಇವರು ಉಪಸ್ಥಿತರಿದ್ದರು.

ಪ್ರಥಮ ಬಿಕಾಂ ವಿದ್ಯಾರ್ಥಿ ಶ್ರೀ ರಾಮ ಇವರು ಪ್ರಾಸ್ತಾವಿಕ ಮಾತಿನ ಮೂಲಕ ಸ್ವಾಗತಿಸಿದರು.

ದ್ವಿ ತೀಯ ಬಿಕಾಮ್ ವಿದ್ಯಾರ್ಥಿನಿಯಾದ ಕು. ಮೆಧಿನಿ ಇವರು ಸಭಾಸಂಚಾಲನೆಯನ್ನು ಮಾಡಿ, ಧನ್ಯವಾದರ್ಪಾಣೆಯನ್ನು ನೀಡಿದಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು