ಕಾಪು : ಮನನೊಂದ ಹೆಂಡತಿಯ ಮನೆಯ ಮುಂಭಾಗ ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

ಮನನೊಂದ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಮನೆಯ ಮುಂಭಾಗ ಇರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನ ಬೆಳಪುವಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮೃತರನ್ನು ಗೋವಾ ಮೂಲದ ಝಹೀರ್ ಎಂದು ಗುರುತಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಳೂರಿನ SDPI ಆ್ಯಂಬುಲೆನ್ಸ್ ಮೂಲಕ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗೂ ಹಮೀದ್ ಉಚ್ಚಿಲ ಸೇರಿ ಮೃತ ಶರೀರವನ್ನು ಅಜ್ಜರಕಾಡಿನ ಶವಾಗಾರಕ್ಕೆ ಸೇರಿಸಿದರು.

ಈ ಸಂದರ್ಭದಲ್ಲಿ ನಿಹಾದ್ ಮಜೂರು,ನಿಷಾದ್ ಮಜೂರು,ಇರ್ಫಾನ್ ಬೆಳಪು,ಶಮೀಮ್ ಬೆಳಪು ಹಾಗೂ ಶುಹೈಬ್ ಮಜೂರು ಕೂಡಾ ಸಹಕರಿಸಿದರು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು