ಮುಟ್ಟಿನ ನೈರ್ಮಲ್ಯದ ದಿನದ ಪ್ರಯುಕ್ತ ಮಾಹಿತಿ ಕಾರ್ಯಾಗಾರ

ಮಣಿಪಾಲ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ನರ ಸಂಘ ಹಾಗೂ ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರದ ಸಂಯುಕ್ತ ಪ್ರಾಯೋಜಕತ್ವದಲ್ಲಿ ಮುಟ್ಟಿನ ನೈರ್ಮಲ್ಯದ ದಿನದ ಪ್ರಯುಕ್ತ ಮಾಹಿತಿ ಕಾರ್ಯಾಗಾರ.

ಸ್ಥಳ ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಬಾರ್ಕೂರು. ವಸಂತ ಕುಮಾರಿ. ಎನ್ .ಎಸ್ ನಿಲಯ ಮೇಲ್ವಿಚಾರಕರ ಅಧ್ಯಕ್ಷತೆಯಲ್ಲಿ ಶ್ರೀಮತಿ ವಿದ್ಯಾ ನಾಗರಾಜ್ ಹದಿಹರೆಯದ ಮಾನಸಿಕ ಆರೋಗ್ಯ, ಡಾ ರಂಜಿತಾ ನಾಯಕ್ ಮುಟ್ಟಿನ ನೈರ್ಮಲ್ಯ, ಡಾ ರಾಜಲಕ್ಷ್ಮಿ HPV ಲಸಿಕೆಯ ಕುರಿತು ಮಾಹಿತಿ ನೀಡಿದರು.

120 ವಿದ್ಯಾರ್ಥಿನಿಯರು ಭಾಗವಹಿಸಿದ್ದ ಕಾರ್ಯಕ್ರಮದ ಲ್ಲಿ ಹತ್ತಿಯ ಸ್ಯಾನಿಟರಿ ಪ್ಯಾಡ್ ಹಾಗೂ ಮುಟ್ಟಿನ ಕಪ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು