ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26-27 ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಜೂನ್ 1 ರಂದು ನಡೆಯಿತು. ಶಾಲಾ ಪ್ರವೇಶ ದ್ವಾರದಿಂದ ಬ್ಯಾಂಡ್ ಸೆಟ್ ನೋಂದಿಗೆ ಮೆರವಣಿಗೆಯ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಬಳಿಕ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ ಮುಖ್ಯಅತಿಥಿಯಾಗಿ ಭಾಗವಹಿಸಿದ್ದು “ ಮಕ್ಕಳು ಹಿರಿಯರಿಗೆ ಹಾಗೂ ಶಿಕ್ಷಕರಿಗೆ ಗೌರವ ಕೊಡುವ ಪರಿಪಾಠ ಹೊಂದಬೇಕು. ಶಾಲೆಯ ವಸ್ತುಗಳನ್ನು ಹಾಳು ಮಾಡಬಾರದು” ಎಂದರು.ಸಭೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಗುರುರಾಜ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಸ್ವಾಗತಿಸಿದರು. ಶಾಲಾ ಸಂಚಾಲಕರಾದ ಶ್ರೀ ಪ್ರಭಾಕರ ಕಾಮತ್ ಪ್ರಸ್ಥಾವಿಕ ಮಾತನಾಡಿದರುಸಾಲಿಗ್ರಾಮ ಪ. ಪಂಚಾಯ್ತ್ ಮಾಜಿ ಸದಸ್ಯ ಸಂಜೀವ ದೇವಾಡಿಗ ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಮತಿ ಗೀತಾ ವಂದಿಸಿದರು. ಅಧ್ಯಾಪಕ ಶ್ರೀ ಸುಧೀರ್ ಮೇಸ್ಟ್ರು ನಿರೂಪಿಸಿದರು.

0 ಕಾಮೆಂಟ್‌ಗಳು