BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕಲಾಸಂಸ್ಕೃತಿ

ಕೋಟ ಕಾವ್ಯ ಹಂದೆ ಅಭಿನಯದ 'ಹಕ್ಕಿ ಮತ್ತು ಅವಳು' ಏಕವ್ಯಕ್ತಿ ಕಾವ್ಯಾಭಿನಯ ಪ್ರದರ್ಶನ

ಕೋಟ : ಸುವಿಕಾ ಸಾಂಸ್ಕೃತಿಕ ಸಂಘಟನೆ, ಕೋಟ ಸಂಸ್ಥೆಯಿಂದ ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಮತ್ತು ಮೈಸೂರಿನ ಆರೋಹ ಕನ್ಸ್ಟ್ರಕ್ಷನ್ ಇವರ ಜಂಟಿ ಆಶ್ರಯದಲ್ಲಿ ದಿನಾಂಕ ಜೂನ್ 27 ಹಾಗೂ ಬೆಂಗಳೂರಿನ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೋರಮಂಗಲದ ಇಂಡಿಯನ್ ಹೆರಿಟೇಜ್ ಅಕಾಡೆಮಿಯ 'ಕಶ್ಯಪ' ಸಭಾಂಗಣದಲ್ಲಿ ಜೂನ್ 28 ರಂದು ರಾಷ್ಟ್ರೀಯ ರಂಗನಿರ್ದೇಶಕ ಡಾ. ಶ್ರೀಪಾದ್ ಭಟ್ ಅವರ ಪರಿಕಲ್ಪನೆ ವಿನ್ಯಾಸ ನಿರ್ದೇಶನದಲ್ಲಿ ಕೋಟ ಕಾವ್ಯ ಹಂದೆ ಅಭಿನಯದ ಏಕವ್ಯಕ್ತಿ ಪ್ರದರ್ಶನ 'ಹಕ್ಕಿ ಮತ್ತು ಅವಳು' ಕಾವ್ಯಾಭಿನಯದ ಎರಡು ಪ್ರದರ್ಶನಗಳು ನಡೆದವು.

ಕನ್ನಡದಲ್ಲಿನ ಹಾಗೂ ಕನ್ನಡಕ್ಕೆ ಅನುವಾದ ಗೊಂಡಿರುವ ಆಯ್ದ ಕವನಗಳು ಕಥೆಗಳು ಮತ್ತು ಪ್ರಬಂಧಗಳನ್ನು ಆಧರಿಸಿದ 'ಹಕ್ಕಿ ಮತ್ತು ಅವಳು' ಹೆಣ್ಣಿನ ಅಸ್ತಿತ್ವ, ಸ್ವಾತಂತ್ರ್ಯ, ಬಿಡುಗಡೆಯ ಕನಸು, ಹಾಗೂ ಬದುಕಿನ ಸಂಕೀರ್ಣ ಬಂಧನಗಳನ್ನು ಕಲಾತ್ಮಕವಾಗಿ ಅನಾವರಣಗೊಳಿಸುವ ರಂಗ ಪ್ರಯೋಗವಾಗಿದೆ.

ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿಯ ಮುಖ್ಯಸ್ಥ ಚೆಲುವ ರಾಜು, ಮಾಜಿ ಕಾರ್ಪೊರೇಟರ್ ರಾಮ್ ಪ್ರಸಾದ್, ಆರೋಹ ಕನ್ಸ್ಟ್ರಕ್ಷನ್ ಎಂ. ಡಿ. ಅಭಿಜಿತ್ ಭಾರದ್ವಾಜ್, ಬೆಂಗಳೂರಿನ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದ ಸಂವಹನ ನಿಕಾಯದ ಕನ್ನಡ ಉಪಕ್ರಮಗಳು ತಂಡದ ಸಹ ನಿರ್ದೇಶಕ ಎಸ್. ವಿ. ಮಂಜುನಾಥ್, ಕನ್ನಡ ಉಪಕ್ರಮ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಹೇರ್ಳೆ ಜಿ., ಉಪಸ್ಥಿತರಿದ್ದರು.

'ಸುವಿಕಾ'ದ ಕುಮಾರಿ ಕಾವ್ಯ ಹಂದೆ ಅಭಿನಯಿಸಿ, ವಿನಿತ ಎಸ್. ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿ, ನೀನಾಸಂ ಮಧುಸೂದನ್ ಬೆಳಕಿನ ವಿನ್ಯಾಸ ಮಾಡಿದರು. ರಂಗ ಸಜ್ಜಿಕೆಯಲ್ಲಿ ಎಚ್. ಸುಜಯೀಂದ್ರ ಹಂದೆ ಸಹಕರಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!