ನಿಟ್ಟೂರು ಪ್ರೌಢಶಾಲೆ : ಶಾಲಾ ಪ್ರಾರಂಭೋತ್ಸವ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಡಗರದಿಂದ ಜರಗಿತು. ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಶ್ರೀ ರಾಮದಾಸ್ ನಾಯ್ಕ್ ಮತ್ತು ಶಿಕ್ಷಕರು ಹೂಗುಚ್ಚ ನೀಡಿ ಶಾಲೆಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ ಇವರ ಪ್ರಾಯೋಜಕತ್ವದಲ್ಲಿ ನೀಡಿದ ಸಿಹಿತಿಂಡಿಯನ್ನು ಕರಂಬಳ್ಳಿ ವಾರ್ಡ್ನ ಕೌನ್ಸಿಲರ್ ಗಿರಿಧರ್ ಆಚಾರ್ಯ, ಮಾಜಿ ಸದಸ್ಯೆ ಗೀತಾ ಶೇರಿಗಾರ್ ಮತ್ತು ಸದಸ್ಯರಾದ ಕಿಶೋರ್ ಕುಮಾರ್, ಪ್ರಥ್ವಿರಾಜ್, ಗೋಪಾಲ ಪೂಜಾರಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು