BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಉಡುಪಿ : 'ಬೆಳಗೋಣ ಸಂಸ್ಕಾರ ದೀಪ ಇದು ಬಾಳ ಗುಡಿಗೆ ನಂದಾ ದೀಪ' ಕಾರ್ಯಕ್ರಮ

ಸಂತ್ರಪ್ತಿ ಪರಿಯಾಳ ಬಳಗ ಮತ್ತು ಸಾಂತ್ವನ ಪರಿಯಾಳ ಬಳಗ ಉಡುಪಿ ಇವರ ಸಹಭಾಗಿತ್ವದಲ್ಲಿ ಹರ್ಷ ಭಾರತಿ ಸೇವಾ ಟ್ರಸ್ಟ್ ಉಡುಪಿ ಇವರ ಸಂಪೂರ್ಣ ಪ್ರಯೋಜಕತ್ವದಲ್ಲಿ ಉಡುಪಿ ಮತ್ತು ದ. ಕ. ಜಿಲ್ಲೆಯ ಪರಿಯಾಳ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ಧನ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಮತ್ತು 'ಬೆಳಗೋಣ ಸಂಸ್ಕಾರ ದೀಪ ಇದು ಬಾಳ ಗುಡಿಗೆ ನಂದಾ ದೀಪ' ಎಂಬ ಸಂಸ್ಕಾರ, ಸಂಸ್ಕೃತಿ ಪ್ರಸ್ತುತಿ ಕಾರ್ಯಕ್ರಮ ಉಡುಪಿಯ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಹರ್ಷ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷೆ ಭಾರತಿ ಹರೀಶ್ ಸುವರ್ಣರ ಅಧ್ಯಕ್ಷತೆಯಲ್ಲಿ ನೆರವೇರಿತು,ಮುಖ್ಯ ಅತಿಥಿ ಗಳಾಗಿ ಸ್ವ ಸಮಾಜದವರೇ ಆದ ಶ್ರೀ ಶ್ರೀನಿವಾಸ ಸುವರ್ಣ ಎಕ್ಕಾರು,, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಉಡುಪಿ ಮತ್ತು ಬಾರಕೂರು N. R ದಾಮೋದರ ಶರ್ಮಾ ರವರು ಇದ್ದು ನಿರಂತರ ಒಂದೂವರೇ ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸಂಸ್ಕಾರ ಸಂಸ್ಕೃತಿ ಬಗ್ಗೆ ಉಪಾನ್ಯಾಸ ನೀಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು ಸಂತ್ರಪ್ತಿ ಪರಿಯಾಳ ಬಳಗದ ಅಧ್ಯಕ್ಷರು ಶೇಖರ್ ಸಾಲಿಯಾನ್ ಆದಿಉಡುಪಿ,ವೇದಿಕೆ ಯಲ್ಲಿದ್ದರು, ಕುಮಾರಿ ನಿಸ್ಮಿತಾ ಸಚ್ಚೆರಿಪೇಟೆ ಪ್ರಾರ್ಥಿಸಿದರು. ಸಾಂತ್ವನ ಪರಿಯಾಳ ಬಳಗದ ಅಧ್ಯಕ್ಷರು ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ, ಪ್ರಸ್ತಾವನೆ ಮಾಡಿದರು, ಸಾಂತ್ವನ ಬಳಗದ ಸದಸ್ಯರು,, ಉಡುಪಿ ಜಿಲ್ಲೆಯಲ್ಲಿರುವ ನಿರಾಶ್ರಿತರ ಆಶ್ರಯ ಗಳಿಗೆ ತೆರಳಿ ಉಚಿತವಾಗಿ ಕ್ಷವುರ ಸೇವೆ ನೀಡುವ ಸತೀಶ್ ಸುವರ್ಣ ಪಂದುಬೆಟ್ಟು ದಂಪತಿಗಳಿಗೆ ಸನ್ಮಾನಿಸಲಾಯಿತು,, ಹಾಗೆಯೇ ಉತ್ಕ್ರಷ್ಟ ಅಂಕ ಗಳನ್ನು ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಪುರಸ್ಕಾರ ದೊಂದಿಗೆ ಗೌರವಿಸಲಾಯಿತು,, ಹರ್ಷ ಭಾರತಿ ಸೇವಾ ಟ್ರಸ್ಟ್ ನ ಪ್ರವರ್ತಕರಾದ ಪರಿಯಾಳ ಸಮಾಜದ ದಾನ ಶೂರ ಕರ್ಣ ನೆಂದೇ ಬಿಂಬಿತರಾಗಿರುವ ಕೊಡುಗೈದಾನಿ ಹರೀಶ್ ಸುವರ್ಣ ದಂಪತಿಗಳನ್ನು ಗೌರವಿಸಲಾಯಿತು,, ಹಾಗೆಯೇ ದಂಪತಿಗಳು SSLC, PUC, ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಸುಮಾರು 80 ವಿದ್ಯಾರ್ಥಿಗಳಿಗೆ ಒಳ್ಳೆಯ ಮೊತ್ತದೊಂದಿಗೆ ವಿದ್ಯಾ ಸಹಾಯ ಧನ ಹಾಗೂ ಸ್ಕೂಲ್ ಬ್ಯಾಗ್ ವಿತರಿಸಲಾಯಿತು,,, ಟ್ರಸ್ಟಿಗಳಾದ ವಿನಯ್, ಭಾಗ್ಯ ದಂಪತಿ ಹಾಗೂ ಭರತ್ ಉಪಸ್ಥಿತರಿದ್ದರು, ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷರು ಸಂದೀಪ್ ಸಾಲಿಯಾನ್, ನಿಕಟ ಪೂರ್ವಧ್ಯಕ್ಷರಾದ ಶಂಕರ್ ಸಾಲಿಯಾನ್ ಕಟಪಾಡಿ, ದ ಕ.ಜಿಲ್ಲಾ ಪರಿಯಾಳ ಸಮಾಜದ ಗೌರವ ಅಧ್ಯಕ್ಷ ರಾದ ರಮೇಶ್ ಬಂಗೇರ ಸೂಟರ್ ಪೇಟೆ,, ಪರಿಯಾಳ ಮಹಾಸಭಾ ಅಧ್ಯಕ್ಷರು ಆದ ಸುನಿಲ್ ಕುಮಾರ್ ಹೆಜಮಾಡಿ, ಪೂರ್ವಧ್ಯಕ್ಷರಾದ ಪ್ರವೀಣ್ ಸಾಲಿಯಾನ್ ಕಾವೂರು,,ಜಯಂತ್ ಸುವರ್ಣ ಬಜ್ಪೆ,ಚಂದ್ರನಾಥ್ ಸಾಲಿಯಾನ್,,, ಜಯಕರ್ ಸಾಲಿಯಾನ್ ಬೆಳುವಾಯಿ ಹಾಗೂ ಸಮಾಜದ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು,, ಬೆಳಿಗ್ಗೆ ಉಪಹಾರ ಹಾಗೂ ಮದ್ಯಾಹ್ನ ಭೋಜನ ವ್ಯವಸ್ಥೆ ಸಜ್ಜುಗೊಳಿಸಲಾಗಿತ್ತು,ಪ್ರಶಾಂತ್ ಸಾಲಿಯಾನ್ ನಲ್ಲೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!