ಪತಂಜಲಿ ಯೋಗ ಸಮಿತಿ ಉಡುಪಿ, ಪಣಿಯಾಡಿ ಕಕ್ಷೆಯವರಿಂದ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರ, ಪಣಿಯಾಡಿಯಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಕಕ್ಷೆಯ ಪ್ರಥಮ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ನಾರಾಯಣ ಮಡಿ, ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಶ್ರೀ ಕೆ.ರಾಘವೇಂದ್ರ ಭಟ್, ನ್ಯಾಯವಾದಿ ಶ್ರೀ ಕೆ. ಆರ್. ರಾಮಚಂದ್ರ ಅಡಿಗ, ಪತಂಜಲಿ ಅಜೀವ ಸದಸ್ಯ ಮಲ್ಪೆ ವಿಶ್ವನಾಥ್ ಭಟ್, ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಯೋಗ ಪ್ರಾತ್ಯಕ್ಷಿಕೆ ಹಾಗೂ ಯೋಗ ನ್ರತ್ಯ ಪದ್ಮಾಕ್ಷೀ ಆರ್ ಆಚಾರ್ಯ ಮತ್ತು ರವೀನಾ ಶೆಟ್ಟಿ ಹಾಗೂ ನಿತ್ಯ ಯೋಗಾರ್ತಿಗಳವರಿಂದ ನಡೆಯಿತು.

0 ಕಾಮೆಂಟ್‌ಗಳು