21.6.2026 ನೇ ಭಾನುವಾರ ರಾಗಧನ ಸಂಸ್ಥೆಯ 50ನೆಯ ಸರಣಿ ಸಂಗೀತ ಕಾರ್ಯಕ್ರಮವು, ಶ್ರೀ ಎಲ್ಲೂರು ಲಕ್ಷ್ಮೀನಾರಾಯಣ ಜ್ಯೋತಿಷ್ಕ ಸ್ಮರಣಾ ಟ್ರಸ್ಟ್ ನ ಸಹಯೋಗದೊಂದಿಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅಪರಾಹ್ನ 3.45ರಿಂದ ನಡೆಯಲಿದೆ.
ಚೆನ್ನೈನ ಸ್ವರಾತ್ಮಿಕಾ ಶ್ರೀಕಾಂತ್ ಅವರು ಕರ್ನಾಟಕ ಸಂಗೀತ ಕಛೇರಿಯನ್ನು ನಡೆಸಿಕೊಡಲಿದ್ದಾರೆ. ಇವರಿಗೆ ಚಿನ್ಮಯೀ ಉಪ್ಪಂಗಳ ವಯೋಲಿನ್ ನಲ್ಲಿ ಹಾಗೂ ಶ್ರೀ ಸುನಾದ ಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು