ಕೊಂಕಣಿ ರಂಗಾಂತರ ರಂಗ ತರಬೇತಿ ಕಾರ್ಯಕ್ರಮ ಉದ್ಘಾಟನೆ

 

ಅನಂತ ವೈದಿಕ ಕೇಂದ್ರ ಉಡುಪಿ, ಸುಪ್ರಸಿದ್ಧ ರಂಗಕರ್ಮಿ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ, ಚಲನ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಇವರ ನಿರ್ದೇಶನ ರಂಗಭೂಮಿ ಕಾರ್ಯಗಾರ ಮೇ 30 ರಂದು ಒಳಕಾಡು ಪದ್ಮಾವತಿ ಸಭಾ ಸದನದಲ್ಲಿ 2 ದಿನದ ಕೊಂಕಣಿ ರಂಗಾಂತರ ರಂಗ ತರಬೇತಿ ಕಾರ್ಯಕ್ರಮಕ್ಕೆ ತರಂಗ ವಾರ ಪತ್ರಿಕೆ ಸಂಪಾದಕಿ ಡಾ. ಸಂಧ್ಯಾ ಪೈ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕೊಂಕಣಿ ಸಾಹಿತ್ಯ,ಭಾಷೆ, ಸಂಸ್ಕೃತಿ ಉಳಿಸಿ ಬೆಳಸಲು ಇಂತಹ ಕಾರ್ಯಗಾರ ನಿರಂತರವಾಗಿ ನಡೆಯಲಿ, ಮಕ್ಕಳಿಗೆ ಕಲೆ, ಸಂಸ್ಕೃತಿ, ಜೀವನದ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ರೊಪಿಸಬೇಕು, ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ್ದಲ್ಲಿ ನಾವು ಕೊಡ ಉತ್ತಮ ಕಲಾವಿದರಾಗಿ ರೊಪಗೊಳ್ಳಲು ಸಾಧ್ಯವೆಂದರು.

ಮುಖ್ಯ ಅತಿಥಿಗಳಾದ ಪುತ್ತೂರು ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ತಾನ ಇದರ ಆಡಳಿತ ಮೊಕ್ತೇಸರ ವಸಂತ ನಾಯಕ್, ದೈವಜ್ಞ ಬ್ರಾಹ್ಮಣ ಸಮಾಜ ಉಡುಪಿ ಅಧ್ಯಕ್ಷರಾದ ಶಿವಶಂಕರ ಶೇಟ್, ಸಭೆಯ ಅಧ್ಯಕ್ಷತೆ ಯನ್ನು ಸಮಾಜ ಸೇವಕ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವ ಅಧ್ಯಕ್ಷರಾದ ವಿಶ್ವನಾಥ್ ಶೆಣೈ ವಹಿಸಿದ್ದರು, ಕೊಂಕಣಿ ರಂಗಾ ತರಂಗ ಸಂಚಾಲಕ ಶಶಿ ಭೂಷಣ ಕಿಣಿ ಉಪಸ್ಥಿತರಿದ್ದರು.

ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೆ. ಮೂ. ಚೆಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಮಾತನಾಡುವ ವಿವಿಧ ಸಮಾಜದ ವಿದ್ಯಾರ್ಥಿಗಳು ಉಪಸ್ಥರಿದ್ದರು.

ಕೊಂಕಣಿ ಆಕಾಡಮಿ ಮಾಜಿ ಅಧ್ಯಕ್ಷ ಹಾಗೂ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ ಕೊಂಕಣಿ ಭಾಷೆ ಸಂಸ್ಕೃತಿ ಬೆಳೆಸುವ ಉದ್ದೇಶ ದಿಂದ ಈ ಕಾರ್ಯ ಹಮ್ಮಿಕೊಂಡಿದ್ದೂ ರಂಗ ಕ್ಷೇತ್ರದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಮಾಜ ಬಾಂದವರು ಕೈ ಜೋಡಿಸುವಂತೆ ಕರೆನೀಡಿದರು ಕಾಸರಗೋಡು ಚಿನ್ನಾ ಶಿಬಿರಾರ್ಥಿ ಗಳಿಗೆ ರಂಗ ತರಬೇತಿ ಗಳಾದ ಧ್ವನಿ, ಭಾಷೆ, ಅಭಿನಯ ಹಾಗೂ ಮುಖಾ ಅಭಿನಯ, ವಿವಿಧ ಭಾಷೆಗಳ ಮೂಲಕ ಅಭಿನಯಿಸುವ ಕಲಾ ಪ್ರಕಾರಗಳನ್ನು ಮಕ್ಕಳಿಗೆ ತಿಳಿ ಹೇಳಿ ಹುರಿ ದುಂಬಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು