ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಿಲಾಮಯ ಸುತ್ತುಪೌಳಿಯ ಪಾದುಕಾನ್ಯಾಸ ಕಾರ್ಯಕ್ರಮ ವು ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇ.ಮೂ. ಶ್ರೀ ಬೆಳ್ಮಣ್ಣು ಸತೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಗುರುವಾರ ನೆರವೇರಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಆಶೀರ್ವಚನ ನೀಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಯಶಸ್ವಿಯಾಗಿ ನೆರವೇರಲೆಂದು ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಮುಂಬೈ ಘಟಕದ ಅಧ್ಯಕ್ಷರಾದ ಸಾಂತೂರು ನಡಿಮನೆ ಶ್ರೀ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ವೇ.ಮೂ. ವಿಠಲ ಜೋಯಿಸರು, ಅರ್ಚಕರಾದ ವೇ.ಮೂ. ಗುರುರಾಜ ಜೋಯಿಸರು, ವೇ.ಮೂ. ಅನಂತ ತಂತ್ರಿ, ಶ್ರೀ ದಯಾನಂದ ಹೆಗ್ಡೆ (ಸಾಂತೂರು ಪರಾರಿ), ಶ್ರೀ ರತ್ನಾಕರ ಶೆಟ್ಟಿ (ಸಾಮನಾಡಿಗುತ್ತು), ಡಾ. ಸುಧಾಕರ ಶೆಟ್ಟಿ (ಕುಂದಬೆಟ್ಟು), ಶ್ರೀಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷರಾದ ಶ್ರೀ ರಾಜಶೇಖರ ಕೋಟ್ಯಾನ್ (ಸಾಂತೂರು ಗರಡಿಮನೆ), ಶ್ರೀಮತಿ ಗೀತಾ ಶೆಟ್ಟಿ, ಶ್ರೀಮತಿ ಸ್ಮಿತಾ ರಮೇಶ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ದಾನಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ವೇದಘೋಷವನ್ನು ಶ್ರೀ ರಘುಪತಿ ಜೋಯಿಸ ಹಾಗೂ ಶ್ರೀ ಹರಿಕೃಷ್ಣ ತಂತ್ರಿ ನೆರವೇರಿಸಿದರು. ವೇ.ಮೂ. ಶ್ರೀನಿವಾಸ ತಂತ್ರಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಸುಧೀರ್ ರಾವ್ ವಂದಿಸಿದರು. ಪಿಲಾರು ಸುಧಾಕರ ಶೆಣೈ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು