BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಯುವಕ ಮಂಡಲ (ರಿ.) ಸಾಣೂರು ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 'ಗೌರವ ಅಭಿನಂದನ' ಕಾರ್ಯಕ್ರಮ

ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ವತಿಯಿಂದ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಪಡೆದ ಸಾಣೂರು ಗ್ರಾಮದ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಸಾಣೂರು ಇಲ್ಲಿನ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನ ಕಾರ್ಯಕ್ರಮ ದಿ. 14/6/26 ರಂದು ರೆಜೆನ್ಸಿ ಸಭಾಂಗಣ ಮುರತಂಗಡಿ ಸಾಣೂರು ಇಲ್ಲಿ ನಡೆಯಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾಣೂರು ಇದರ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀರಾಮ ಭಟ್ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಜಯ ಶೆಟ್ಟಿ ಉದ್ಯಮಿಗಳು ವಿಜೇತಾ ಕಾರ್ಕಳ, ಇವರು ವಹಿಸಿ ಮಕ್ಕಳಿಗೆ ತಮ್ಮ ಸಂದ ಗೌರವ ಮುಂದಿನ ಶೈಕ್ಷಣಿಕ ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆ ಸಿಗಲಿ ಎಂದರು. ಸಾಣೂರು ಯುವಕ ಮಂಡಲದ ಸಾಮಾಜಿಕ ಚಟುವಟಿಕೆ ಇಡೀ ರಾಜ್ಯಕ್ಕೆ ಮಾದರಿ ವಿಭಿನ್ನ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರತಿ ವರ್ಷ ಪ್ರೋತ್ಸಾಹ ನೀಡುವುದು ಶ್ಲಾಘನೀಯವೆಂದರು ನಾವೆಲ್ಲ ಯುವಕ ಮಂಡಲದ ಪ್ರತಿಯೊಂದು ಕಾರ್ಯಕ್ರಮಕ್ಕೆ ಜೊತೆ ಇದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ್ ಕುಮಾರ್.ವಿ. ಕರ್ಕೇರ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ ಇವರು ಪ್ರಮುಖ ಭಾಷಣ ಮಾಡಿ ಪೈಪೋಟಿ ಯುಗದಲ್ಲಿ ಇತರರಿಗೆ ಹೋಲಿಸಿಕೊಳ್ಳದೆ ನಾವು ನಾವಾಗಿಯೇ ಸಾಧನೆಗೈದು ಇತರರಿಗೆ ಮಾದರಿಯಾಗೋಣ ಕೇವಲ ಅಂಕ ಗಳಿಸುವ ಗುರಿ ಹೊಂದದೆ ಜೀವನದ ಯಶಸ್ವಿಗೆ ಮುನ್ನಡೆಯೋಣ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಶ್ರೀ ವಿದ್ಯಾನಂದ ಕರ್ಕೇರ ಗೌರವ ನಿರ್ದೇಶಕರು ಭಾರತ್ ಕೋಪರೇಟಿವ್ ಬ್ಯಾಂಕ್ ಮುಂಬೈ ಮತ್ತು ಇವರ ಪತ್ನಿ ಶ್ರೀಮತಿ ಗುಣ ವಿ. ಕರ್ಕೇರ ಇವರು ಒಟ್ಟು ರೂಪಾಯಿ 25000/- ಮೊತ್ತದ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಮಂಡಲದ ಸೇವಾ ಕಾರ್ಯಕ್ರಮಗಳಿಗೆ ಅಭಿನಂದನೆ ತಿಳಿಸಿದರು. 

ಶ್ರೀಮತಿ ಸುಚೇತಾ ಕಾಮತ್ ಪ್ರಾಂಶುಪಾಲರು ಸರಕಾರಿ ಪದವಿಪೂರ್ವ ಕಾಲೇಜ್ ಸಾಣೂರು ಸುಧೀರ್ ನಾಯಕ್ ಸಚ್ಚರಿಪೇಟೆ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟೆ, ಶ್ರೀಮತಿ ಕಲಾವತಿ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತೂರು, ಪ್ರಕಾಶ್ ಶಿಕ್ಷಕರು ಪ್ರೌಢಶಾಲಾ ವಿಭಾಗ ಸರಕಾರಿ ಪದವಿ ಪೂರ್ವ ಕಾಲೇಜ್ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ. ಯ 11 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ಯ 38 ಒಟ್ಟು 49 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದರೊಂದಿಗೆ ಪದೊನ್ನತಿ ಹೊಂದಿದ ಸುಧೀರ್ ನಾಯಕ್ ಹಾಗೂ ಶ್ರೀಮತಿ ಕಲಾವತಿ ಇವರನ್ನು ಅಭಿನಂದಿಸಲಾಯಿತು. ವಿಶೇಷವಾಗಿ ಭಾರತೀಯ ಸೇನೆ ಅಗ್ನಿವೀರ್ ಗೆ ಆಯ್ಕೆಯಾದ ನವದೀಪ್ ಆರ್ ಶೆಟ್ಟಿಗಾರ್ ಇವರನ್ನು ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಮಂಡಲದ ಮಾಜಿ ಅಧ್ಯಕ್ಷರುಗಳಾದ ಶ್ರೀ ರಘು ಪೂಜಾರಿ, ಶ್ರೀ ದೇವಾನಂದ್ ಶೆಟ್ಟಿ ಶ್ರೀ ಮಹೇಶ್ ಕುಮಾರ್ ಶ್ರೀ ಜಗದೀಶ್ ಕುಮಾರ್ ಶ್ರೀ ಶಂಕರ್ ಶೆಟ್ಟಿ ಶ್ರೀ ಪ್ರಕಾಶ್ ಮಡಿವಾಳ ಹಿರಿಯ ಸದಸ್ಯರುಗಳಾದ ಶ್ರೀ ರಾಮದಾಸ್ ಭಟ್, ಶ್ರೀ ಸುಂದರ್ ಶೆಟ್ಟಿ ಶ್ರೀ ಆನಂದ್ ಸುವರ್ಣ ಶ್ರೀ ಪ್ರಶಾಂತ್ ಶೆಟ್ಟಿ, ಶ್ರೀ ದಿನೇಶ್ ನಾಯಕ್ ಕಿರಣ್ ಕುಲಾಲ್ ಸಮಿತಿ ಸದಸ್ಯರುಗಳಾದ ಅನಿಲ್ ಕೋಟ್ಯಾನ್ ಪ್ರಶಾಂತ್ ಆಚಾರ್ಯ ಪ್ರಭಾಕರ್ ಶೆಟ್ಟಿ ದಿನೇಶ್ ಮಡಿವಾಳ ಜಯ ಶೆಟ್ಟಿಗಾರ್ ದಿನೇಶ್ ಶೆಟ್ಟಿಗಾರ್ ವಿದ್ಯಾನಂದ್ ಕೋಟ್ಯಾನ್, ಪ್ರಸನ್ನ ಆಚಾರ್ಯ, ಜಿತೇಶ್ ರಾವ್, ಸುನಿಲ್ ಕುಲಾಲ್ ಹರೀಶ್ ರಾವ್ ಮೊದಲಾದವರು ಹಾಜರಿದ್ದರು. 

ಮಂಡಲದ ಅಧ್ಯಕ್ಷರಾದ ಶ್ರೀ ಪ್ರಸಾದ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಮಂಡಲದ ಉಪಾಧ್ಯಕ್ಷರಾದ ಶ್ರೀ ಮೋಹನ್ ಶೆಟ್ಟಿ ನೆರವೇರಿಸಿದರು ಸನ್ಮಾನಿತರ ಪಟ್ಟಿಯನ್ನು ಶ್ರೀ ಚಂದ್ರಹಾಸ್ ಪೂಜಾರಿ ಮತ್ತು ಶ್ರೀ ಸುದರ್ಶನ್ ನಾಯ್ಕ್ ವಾಚಿಸಿದರು ವಿದ್ಯಾರ್ಥಿಗಳ ವಿವರವನ್ನು ಪ್ರಕಾಶ್ ರಾವ್ ವಾಚಿಸಿದರು ಕಾರ್ಯದರ್ಶಿ ರಾಜೇಶ್ ಪೂಜಾರಿ ಧನ್ಯವಾದಗೈದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!