ಸಂಗೀತಾನುಭವ ಕಾರ್ಯಕ್ರಮ

"ಚಿತ್ರ, ಸಂಗೀತ, ಸಾಹಿತ್ಯ, ನಾಟ್ಯ ಮುಂತಾದ ಲಲಿತಕಲೆಗಳ ಅಭ್ಯಾಸಕ್ಕೆ ಅವಕಾಶ ಕೊಡದೆ ಶೈಕ್ಷಣಿಕ ಸಾಧನೆಯೊಂದನ್ನೇ ಪ್ರೋತ್ಸಾಹಿಸುವಂಥ ಹೆತ್ತವರು ತಮ್ಮ ಮಕ್ಕಳ ಪ್ರತಿಭೆಯನ್ನು ಕೊಲ್ಲುವವರು. ಸಂಕೀರ್ಣವಾದ ಪ್ರಸಕ್ತ ಸನ್ನಿವೇಶದಲ್ಲಿ ಸಂಗೀತವು ಭಾವೋದ್ವಿಗ್ನತೆ ಹಾಗೂ ಭಾವೋದ್ರೇಕವನ್ನು ನಿವಾರಣೆ ಮಾಡಿ ಮನಸ್ಸಿನ ಸಮಸ್ಥಿತಿಯನ್ನು ಕಾಪಾಡುತ್ತದೆ.ಸಂಗೀತಕ್ಕೆ ವಯಸ್ಸಿನ, ಕಾಲದ ಹಂಗಿಲ್ಲ. ಯಾರೂ ಯಾವ ವಯಸ್ಸಿನಲ್ಲೂ ಸಂಗೀತಾಭ್ಯಾಸ ಮಾಡಬಹುದು" ಎಂದು ತೆಕ್ಕಟ್ಟೆಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ, ಅನುವಾದಕಿ ಮತ್ತು ಸಂಗೀತ ಶಿಕ್ಷಕಿ ಶ್ರೀ ಮತಿ ಶಾರದಾ ಹೊಳ್ಳ ನುಡಿದರು. ಅವರು ಈಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಸಂಗೀತಾನುಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರುತಿ, ರಾಗ, ತಾಳ, ಲಯಗಳ ಪರಿಚಯ ಮಾಡಿದ ಬಳಿಕ ಭಾವಗೀತೆ, ಭಕ್ತಿಗೀತೆ, ಜನಪದಗೀತೆ ಮೊದಲಾದ ವಿವಿಧ ಪ್ರಕಾರದ ಗೀತೆಗಳನ್ನು ವಿದ್ಯಾರ್ಥಿ- ಶಿಕ್ಷಕರ ಮೂಲಕ ಹಾಡಿಸಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಸ್ಮರಣಿಕೆ ನೀಡಿದರು.ಕುಮಾರಿ ವಿಶಾಲ ಸ್ವಾಗತ ಕೋರಿದರು. ಶ್ರೀ ನಿಂಗಯ್ಯ ಆಭಾರ ಮನ್ನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು