ಉಡುಪಿ ಪುತ್ತೂರು ದಿ: 14-06-2026ರಂದು ವಿದ್ಯಾನಿಧಿ ಸಮಿತಿ ಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ವಿದ್ಯಾದೇಗುಲ ಪುತ್ತೂರು ಇಲ್ಲಿ ನೆರವೇರಿತು.
ಶ್ರೀ ದೇವರಾಜ ಭಟ್ ಇವರು ಮುಂದಿನ 3 ವರ್ಷಗಳಿಗೆ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶ್ರೀಮತಿ ಚೈತ್ರಾ ಭಟ್ ಮತ್ತು ಕೋಶಾಧಿಕಾರಿಯಾಗಿ ಶ್ರೀ ಎಚ್.ಕೃಷ್ಣರಾಜ ರಾವ್ ಆಯ್ಕೆಯಾಗಿರುತ್ತಾರೆ. 2025-26ನೇ ಸಾಲಿನ ವರದಿಯನ್ನು ಕಾರ್ಯದರ್ಶಿ ಮುರಳೀಧರ ಭಟ್ ವಾಚಿಸಿದರು. ಕೋಶಾಧಿಕಾರಿ ಕೃಷ್ಣರಾಜ ರಾವ್ ಲೆಕ್ಕ ಪತ್ರ ಮಂಡಿಸಿದರು.
ಮಹಾಸಭೆಯ ನಂತರ ವಿದ್ಯಾನಿಧಿ ಸಮಿತಿಯ ವತಿಯಿಂದ ನೀಡಲ್ಪಡುವ ವಿದ್ಯಾ ವಿಶೇಷ ಮಹಾದಾನ, ವಿದ್ಯಾ ಮಹಾದಾನ, ವಿದ್ಯಾದಾನ, ವಿದ್ಯಾಪುರಸ್ಕಾರಗ ವಿವಿಧ ಯೋಜನೆಗಳಡಿಯಲ್ಲಿ ರೂ.11.20 ಲಕ್ಷದಷ್ಟು ಧನ ಸಹಾಯವನ್ನು ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಸಮಿತಿಯ ದಾನಿಗಳಾದ, ರಘುರಾಮ ಆಚಾರ್ಯ ಪುತ್ತೂರು, ಮತ್ತು ರಮಾನಂದ ಹೆಬ್ಬಾರ್ ಇವರುಗಳು ಉಪಸ್ಥಿತರಿದ್ದು ಫಲಾನುಭವಿಗಳಿಗೆ ಧನಸಹಾಯದ ಚೆಕ್ಕುಗಳನ್ನು ವಿತರಿಸಿದರು. ಸಮಿತಿಯ ನಿರ್ಗಮನ ಅಧ್ಯಕ್ಷೆ ಶ್ರೀಮತಿ ವೀಣಾ ಹತ್ವಾರ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಮಾಧವ ಉಪಾಧ್ಯಾಯ, ಕೋಶಾಧಿಕಾರಿ ಎಚ್. ಕೃಷ್ಣರಾಜ ರಾವ್ ಸಭೆಯಲ್ಲಿ ಉಪಸ್ಥಿತರಿದ್ದರು. ಡಾ| ಶ್ರೀಧರ ಬಾಯರಿ ಯವರು ವಿದ್ಯಾನಿಧಿ ಸಮಿತಿ ನಡೆದುಬಂದ ದಾರಿಯನ್ನು ಸಭೆಗೆ ತಿಳಿಸಿದರು. ನೂತನ ಕಾರ್ಯದರ್ಶಿ ಚೈತ್ರಾ ಭಟ್ ವಂದನಾರ್ಪಣೆ ಗೈದರು, ನಿರ್ಗಮನ ಕಾರ್ಯದರ್ಶಿ ಮುರಳಿಧರ ಭಟ್ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು