ದಿನಾಂಕ 7/6/26 ರಂದು ಬೆಳ್ಳಿಗ್ಗೆ “ಸ್ವಚ್ಚ ಸಾಲಿಗ್ರಾಮ, ಸ್ವಚ್ಛ ಕಾರ್ಕಡ" ದ ಅಭಿಯಾನದ ಅಂಗವಾಗಿ ಹಮ್ಮಿಕೊಂಡ “ಬೃಹತ್ ಸ್ವಚ್ಛತಾ ಕಾರ್ಯಕ್ರಮ" ಗೆಳೆಯರಬಳಗ (ರಿ.) ಕಾರ್ಕಡ ಹಾಗೂ ಸಾಲಿಗ್ರಾಮ ಪ. ಪಂಚಾಯತ್ ಆಶ್ರಯದಲ್ಲಿ ಕಾರ್ಕಡದ ಸ್ನೇಹ ಪ್ರೆಂಡ್ಸ್ ಮತ್ತು ಸ್ಪೂರ್ತಿ ಕ್ರಿಕೆಟರ್ಸ ಸದಸ್ಯರ ಸಹಕಾರದೊಂದಿಗೆ ಅತ್ಯಂತ ಯಶಸ್ವೀಯಾಗಿ ಜರುಗಿತು .ಪ್ರಾರಂಭದಲ್ಲಿ ಸಾಲಿಗ್ರಾಮ ಪ.ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಮಮತಾ ಅಭಿಯಾನಕ್ಕೆ ಚಾಲನೆ ನೀಡಿದರು. ಕೆ. ಚಂದ್ರಶೇಖರ ಸೋಮಯಾಜಿ ಪ್ರಸ್ಥಾವಿಕ ಮಾತನಾಡಿದರು. ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಸ್ವಾಗತಿಸಿದರು. NH 66 ಸಾಲಿಗ್ರಾಮದಿಂದ ಕಾರ್ಕಡ - ಕಾವಡಿ ರಸ್ತೆಯ ಎರಡೂ ಬದಿ ಸ್ವಚ್ಚತೆಯನ್ನು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಮಾಡಲಾಯಿತು. ಎಲ್ಲರಿಗೂ ಲಘ ಉಪಹಾರದ ವ್ಯವಸ್ಥೆ ಯನ್ನು ಶ್ರೀ ಮನೋಹರಭಟ್ಟ ನೀಡಿದರು.ಕೊನೆಯಲ್ಲಿ ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ವಂದಿಸಿದರು.

0 ಕಾಮೆಂಟ್‌ಗಳು