ಶ್ರೀ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮುನ್ನಡೆಸುತ್ತಿರುವ ಉಡುಪಿಯ ಗೋವರ್ಧನಗಿರಿ ಟ್ರಸ್ಟ್ ರಿ ಗೋಶಾಲೆಗಳಿಗೆ ಜಗತ್ತಿನ ಪ್ರತಿಷ್ಠಿತ ಉದ್ಯಮ ರಿಲಯನ್ಸ್ ಸಮೂಹ ಸಂಸ್ಥೆಗಳ ಯುವ ಮುಖ್ಯಸ್ಥರೂ ಅದ್ಭುತ ಮಾನವೀಯ ವ್ಯಕ್ತಿತ್ವದ ಧೀಮಂತ ದೇಶಭಕ್ತ ಶ್ರೀ ಅನಂತ ಅಂಬಾನಿಯವರು ನೀಡಿದ ಪ್ರಶಂಸಾ ಪತ್ರ ಇತ್ತೀಚೆಗೆ ರಿಲಯನ್ಸ್ ಸಮೂಹದಿಂದ ಗುಜರಾತಿನ ಜಾಮ್ ನಗರದಲ್ಲಿ ನಡೆಸಲ್ಪಡುತ್ತಿರುವ ಜಗತ್ತಿನ ಅತೀ ದೊಡ್ಡ ವಂತಾರ ಜೀವಲೋಕ ಆವರಣದಲ್ಲಿ ದೇಶದ 50 ಗೋಶಾಲೆಗಳ ಪ್ರತಿನಿಧಿಗಳನ್ನು ಸ್ವತಃ ಅಂಬಾನಿಯವರೇ ಆಹ್ವಾನಿಸಿ ಎರಡು ದಿನಗಳ ಕಾಲ ಗೋರಕ್ಷಣೆಯ ಕುರಿತಾಗಿ ಮಂಥನ ನಡೆಸಿದ್ದರು. ಅದರಲ್ಲಿ ಗೋವರ್ಧನಗಿರಿ ಟ್ರಸ್ಟ್ ಪ್ರತಿನಿಧಿಯಾಗಿ ಪೂಜ್ಯ ಸ್ವಾಮೀಜಿಯವರ ಅನುಗ್ರಹಪೂರ್ವಕ ಸೂಚನೆಯಂತೆ ಜಿ ವಾಸುದೇವ ಭಟ್ ಪೆರಂಪಳ್ಳಿ ಭಾಗವಹಿಸಿದ್ದರು. ಆ ಸಂದರ್ಭ ಈ ಪ್ರಶಂಸಾ ಪತ್ರವನ್ನು ನೀಡಿರುತ್ತಾರೆ.
