BREAKING
ಆರೋಗ್ಯ

ಕಾರ್ಕಡ- ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ ಸಂಬಂಧಿತ ಉಚಿತ ತಪಾಸಣಾ ಶಿಬಿರ

 


ಗೆಳೆಯರ ಬಳಗ ( ರಿ.) ಕಾರ್ಕಡ , ಸಮುದಾಯ ವೈದ್ಯಕೀಯ ವಿಭಾಗ,‌ಕೆ.ಎಂ.ಸಿ., ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ. ಕಾರ್ಕಡ- ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ ಸಂಬಂಧಿತ ಉಚಿತ ತಪಾಸಣಾ ಶಿಬಿರವು ಕಾರ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಸಹಕಾರದೊಂದಿಗೆ ದಿನಾಂಕ 20/8/24 ರ ಮಂಗಳವಾರ ಬೆಳ್ಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.

ಶಿಬಿರವನ್ನು ವಿವೇಕಾಪ್ರೌಢ ಶಾಲಾ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಚಿತ್ರಾಕಾರಂತರು ಶಿಬಿರವನ್ನು ಉದ್ಘಾಟಿಸಿ ಉಚಿತ ವೈದ್ಯಕೀಯ ಶಿಬಿರಗಳ ಉಪಯೋಗವನ್ನು ಪಡೆಯಲು ಸಾರ್ವಜನಿಕರು ಮುಂದಾಗಬೇಕು ಎಂದರು.

ಇಂದು ಎಷ್ಟೋ ಕಡೆಗಳಲ್ಲಿ ವೈದ್ಯಕೀಯ ಸೇವೆಗಾಗಿ ಬಹಳ ಕಷ್ಟ ಪಡಬೇಕಿದ್ದು ,ಗೆಳೆಯರ ಬಳಗ ಕಾರ್ಕಡದಂತಹ ಗ್ರಾಮೀಣ ಪ್ರದೇಶದ ಸಾಮಾಜಿಕ ಸಂಸ್ಥೆಯು ಉಚಿತವಾಗಿ ಕ್ಯಾನ್ಸರ್ನಂತಹ ಖಾಯಿಲೆಗಳ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನಾರ್ಹ ಎಂದರು.

ಶುಭಾಶಂಸನೆಗೈದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಇಂದಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತಿದ್ದು, ವ್ಯಸನಗಳೂ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್‌ನಂತಹ ಖಾಯಿಲೆಗಳು ಹೆಚ್ಚುತ್ತಲಿರುವುದು ಕಳವಳಕಾರಿಯೆಂದರು.ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಶ್ರೀ ಕೆ ತಾರಾನಾಥ ಹೊಳ್ಳ ವಹಿಸಿದ್ದರು . ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶ್ರೀ ರಾಘವೇಂದ್ರ ರಾವ್ ಶಿಬರದ ಮಹತ್ವ ಸಭೆಗೆ ತಿಳಿಸಿದರು.ಸಮುದಾಯ ವೈದ್ಯಕೀಯ ವಿಭಾಗ , KMC , ಮಣಿಪಾಲದ ಡಾ. ಸುಚರಿತ. ಎಸ್ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರಿನ ಪ್ರತಿನಿಧಿ ಶ್ರೀ ರಂಜನ್ ಉಪಸ್ಥಿತರಿದ್ದರು. ಬಳಗದ ಜತೆ ಕಾರ್ಯದರ್ಶಿ ಶ್ರೀ ಶ್ರೀಕಾಂತ ಐತಾಳ ವಂದಿಸಿದರು. ಬಳಗದ ಶ್ರೀ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!