ರಾಷ್ಟೀಯ ಸೇವಾ ಯೋಜನೆ (ಎನ್ ಎಸ್ ಎಸ್) ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ವಾರ್ಷಿಕ ವಿಶೇಷ ಶಿಬಿರ ಕಾಪುವಿನ ಮಹಾದೇವಿ ಪ್ರೌಢಶಾಲೆಯಲ್ಲಿ ಸಂಪನ್ನ ಗೊಂಡಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉದ್ಘಾಟನೆ ಗೊಂಡ ಶಿಬಿರ ಸತತ ಏಳು ದಿನಗಳ ಕಾಲ ನಡೆಯಿತು. ಶಿಬಿರದಲ್ಲಿ ಭಾಗವಹಿಸಿದ 50 ವಿದ್ಯಾರ್ಥಿಗಳು ಮತ್ತು ಶಿಬಿರಧಿಕಾರಿ ಪರಮೇಶ್ವರ್ ಎಂ ಮೊಗವೀರ ನೇತೃತ್ವದಲ್ಲಿ ಕಾಪು ಬೀಚ್,, ಕಾಪು ಪಟ್ಟಣ ದ ಪರಿಸರದಲ್ಲಿದ್ದ ಸುಮಾರು 10 ಕ್ವಿನ್ಟಲ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿ ವಿಲೇವಾರಿ ಮಾಡಲಾಯಿತು. ಮಕ್ಕಳ ವ್ಯಕ್ತಿತ್ವ ವಿಕಾಸ, ಯೋಗ, ಕಾನೂನು, ಪರಿಸರ ವಿಷಯ ಕ್ಕೆ ಸಂಭಂದಿಸಿದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ ಯವರು ಸಮಾರೋಪ ಭಾಷಣ ಮಾಡಿ ಶಿಬಿರಾ ರ್ಥಿಗಳ ಶ್ರಮದಾನವನ್ನು ಶ್ಲಾಘನೆ ಮಾಡಿದರು.
ಸಮಾರೋಪ ಸಮಾರಂಭ ದಲ್ಲಿ ಪ್ರಾಂಶುಪಾಲರಾದ ನಾಗರಾಜ, ಕಾಪು ಬೀಚ್ ಫ್ರೆಂಡ್ಸ್ ಅಧ್ಯಕ್ಷ ಚಂದ್ರಶೇಖರ, ಮಾಧವ ಪಾಲನ, ಮಮತಾ ಶೆಟ್ಟಿ,ವಿದ್ವಾನ್ ಪ್ರಕಾಶ್ ಅಮ್ಮಣ್ಣಯ್ಯ, ಶಿಬಿರಾಧಿಕಾರಿ ಪರಮೇಶ್ವರ್ ಎಂ ಮೊಗವೀರ, ಲಕ್ಷ್ಮೀಕಾಂತ್, ಮಧುಕರ್ ಅಂಚನ್, ಕಾಲೇಜಿನ ಉಪನ್ಯಾಸಕರು ಮತ್ತು ಶಿಬಿರಾ ರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ಸುಮಾ ಪ್ರಾರ್ಥನೆ ಮಾಡಿದರು. ಪರಮೇಶ್ವರ್ ಮೊಗವೀರ ಸ್ವಾಗತಿಸಿ ವರದಿ ವಾಚನ ಮಾಡಿದರು. ಆಶಾ ನಿರೂಪಣೆ ಮಾಡಿದರು. ಲಕ್ಷೀಕಾಂತ ವಂದಿಸಿದರು.
