ಬ್ರಾಡಿ ಕಂಪನಿ ಬೆಂಗಳೂರು ಇವರ ಸಿಎಸ್ ಆರ್ ನಿಧಿಯಿಂದ ಶ್ರೀಕೃಷ್ಣಬಾಲನಿಕೇತನದ ಮಕ್ಕಳ ಉಪಯೋಗಕ್ಕಾಗಿ ನಾಲ್ಕು ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದು ಅದರ ಹಸ್ತಾಂತರ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಫೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು. ಪೂಜ್ಯ ಸ್ವಾಮೀಜಿಯವರು ಮಕ್ಕಳಿಗೆ ಅತ್ಯವಶ್ಯವಾಗಿ ಬೇಕಾಗಿದ್ದ ಕಂಪ್ಯೂಟರನ್ನು ನೀಡಿದಕ್ಕೆ ಬ್ರಾಡಿ ಕಂಪನಿಯ ಅಧಿಕಾರಿಗಳನ್ನು ಅಭಿನಂದಿಸಿ ಅಲ್ಲಿ ಉಪಸ್ಥಿತರಿದ್ದ ಕಂಪನಿಯ ಅಧಿಕಾರಿ ಶ್ರೀ ಪ್ರಕಾಶ್ ಆಚಾರ್ಯ ರನ್ನು ಸನ್ಮಾನಿಸಿದರು. ಶ್ರೀ ಪ್ರಕಾಶ್ ಆಚಾರ್ಯರು ಪೂಜ್ಯ ಸ್ವಾಮೀಜಿಯವರಿಗೆ ಫಲಕಾಣಿಕೆಯಿತ್ತು ಗೌರವಿಸಿದರು. ನಂತರ ಸಂಸ್ಥೆಯ ಹಳೆವಿದ್ಯಾರ್ಥಿ ಮತ್ತು ಬ್ರಾಡಿಕಂಪನಿಯಲ್ಲಿ ಉದ್ಯೋಗದಲ್ಲಿರುವ ಶ್ರೀ ವೃಷಕ್ ಶೆಟ್ಟಿಯವರಿಗೆ ಇತ್ತೀಚೆಗೆ ಕಂಪನಿಯಲ್ಲಿ ವಾರ್ಷಿಕ ಶ್ರೇಷ್ಠತಾ ಪ್ರಶಸ್ಥಿ ಸಿಕ್ಕಿದ ಬಗ್ಗೆ ಹರಸಿ ಆಶೀರ್ವಚಿಸಿದರು ಮತ್ತು ಇನ್ನಷ್ಟು ಸಾದನೆಗಳನ್ನು ಮಾಡುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರೊ. ಕಮಲಾಕ್ಷ, ಶ್ರೀ ರಘುರಾಮ ಆಚಾರ್ಯ, ಶ್ರೀ ರಾಘವೇಂದ್ರ ರಾವ್, ಶ್ರೀ ಗುರುರಾಜ ಭಟ್, ಶ್ರೀ ನಾರಾಯಣ ಬಿ.ಕೆ. ಶ್ರೀ ಸುಬ್ರಹ್ಮಣ್ಯ ಕಾರಂತ, ಮಾತಾಜಿಯವರು ಮತ್ತು ಮಕ್ಲಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀ ರಾಮಚಂದ್ರ ಉಪಾದ್ಯಾಯರು ಕಾರ್ಯಕ್ರಮ ಸಂಯೋಜಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ವಜನೀನ ಟ್ರಸ್ಡ್ ಮುಖಾಂತರ ಬ್ರಾಡಿಕಂಪನಿಯ ಸಿಎಸ್ ಆರ್ ನಿಧಿಯಿಂದ ಶಿಕ್ಷಕರ ಸಂಬಳದ ಬಗ್ಗೆ ನೀಡಿದ ಸಹಾಯದ ಚೆಕ್ ನ್ನು ಪೂಜ್ಯ ಶ್ರೀಗಳವರು ಕುಕ್ಕಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ವಿದ್ಯಾರತ್ನ ಮತ್ತು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಉದಯಕುಮಾರ ಶೆಟ್ಟಿಯವರಿಗೆ ನೀಡಲಾಯ್ತು.
