ನಮ್ಮ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ದಿನವೇ ಜನ್ಮ ನಕ್ಷತ್ರದ ದಿನವಾಗಿದೆ. ನಾವು ಮಾಡಿದ ಸತ್ಕರ್ಮಗಳನ್ನು ದೇವರಿಗೆ ಸಮರ್ಪಿಸಿ ಮುಂದೆ ಮಾಡಲಿರುವ ಸತ್ಕರ್ಮಗಳ ಸಂಕಲ್ಪವನ್ನು ಮಾಡುವುದು ಈ ದಿನವೇ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಜನ್ಮ ನಕ್ಷತ್ರದ ದಿನದಂದು ಭಗವಂತನನ್ನು ವಿಶೇಷವಾಗಿ ಪ್ರಾರ್ಥಿಸುವ ಕಾರ್ಯವನ್ನು ಮಾಡಬೇಕು ಎಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ತಿಳಿಸಿದರು.
*ಅವರು ತಮ್ಮ 63 ನೇ ಜನ್ಮ ನಕ್ಷತ್ರದ ಪ್ರಯುಕ್ತ ಭಕ್ತರು ಕನಕಾಭಿಷೇಕ ಪೂರ್ವಕ ಸಲ್ಲಿಸಿದ ಗುರುವಂದನಾ ಗೌರವವನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಪಾದರ ಪ್ರಿಯ ಶಿಷ್ಯರಾದ ಶತಾವಧಾನಿ ಡಾ.ರಾಮನಾಥ ಆಚಾರ್ಯರು 63 ಸುವರ್ಣ ನಾಣ್ಯಗಳಿಂದ ಅಭಿಷೇಕ ಮಾಡಿ ಗುರುವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಮತ್ತು ಅನೇಕ ಮಠಗಳ ವಿದ್ವಾಂಸರು ಭಕ್ತರು ಉಪಸ್ಥಿತರಿದ್ದರು.
ಜನ್ಮ ನಕ್ಷತ್ರದ ಪ್ರಯುಕ್ತ ವಿಶೇಷ ಹೋಮ ಹವನ ಕಾರ್ಯಕ್ರಮಗಳೂ ಸಂಪನ್ನಗೊಂಡಿತು.