ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ವಸತಿ ಗೃಹಕ್ಕೆ ರವಿವಾರ (ಸೆ.29) ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ನಡೆದಿದೆ.
ಒಟ್ಟು 6 ಅಪಾರ್ಟ್ ಮೆಂಟ್ ಗಳು ಇದರಲ್ಲಿದ್ದು, ಈ ಪ್ಯೆಕಿ 6 ಫ್ಲ್ಯಾಟ್ ಗಳಿಗೆ ಕಳ್ಳರು ನುಗ್ಗಿದ್ದಾರೆ. ಎಲ್ಲಿಯೂ ಸಿಸಿಟಿವಿ ದ್ರಶ್ಯಾವಳಿಗಳು ಇಲ್ಲದ ಕಾರಣ ಯಾವುದೇ ಮಾಹಿತಿ ಲಭಿಸಿಲ್ಲ. ಘಟನ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.