Header Ads Widget

ಮರ್ಣೆ : ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ

ದಿನಾಂಕ 16.09.2024ರಂದು ಸಂಜೆ ಬೊಂಡುಕುಮೇರಿ ನಿವಾಸಿ ಹೆನ್ರಿ ಡಿʼಸೋಜಾ ಇವರು ಅಜೆಕಾರು ಪೇಟೆಯಲ್ಲಿರುವ ಎಟಿಎಮ್‌ನಲ್ಲಿ ಹಣ ಡ್ರಾ ಮಾಡಲು ಬಂದಿರುವ ವೇಳೆ ಅಲ್ಲಿದ್ದ ಅಪರಿಚಿತರು ಅವರ ಗಮನವನ್ನು ಬೇರೆಡೆ ಸೆಳೆದು ಮೋಸದಿಂದ ಅವರ ಎಟಿಎಮ್‌ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್‌ ಕೊಟ್ಟು, ಅವರ ಕಾರ್ಡ್‌ನಿಂದ ಕಾರ್ಕಳದ ಎಟಿಎಮ್‌ನಲ್ಲಿ 1 ಲಕ್ಷ ರೂಪಾಯಿಯನ್ನು ಡ್ರಾ ಮಾಡಿದ್ದು, ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2024 ಕಲಂ: 316(2), 318(2), 111 ಜೊತೆಗೆ 3(5) BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ಪಿಎಸ್‌ಐ ರವಿ ಬಿ.ಕೆ., ಪಿಎಸ್‌ಐ ಶುಭಕರ ಮತ್ತು ಸಿಬ್ಬಂದಿಯವರಾದ ಸತೀಶ ಬೆಳ್ಳೆ, ಪ್ರದೀಪ ಶೆಟ್ಟಿ, ನಾಗೇಶ, ಪ್ರವೀಣ ಕುಮಾರ್‌, ಬಸವರಾಜ ಭದ್ರಶೆಟ್ಟಿ, ಶಶಿಕಲಾ ಇವರ ತಂಡ ಆರೋಪಿಗಳ ಜಾಡು ಪತ್ತೆ ಹಚ್ಚಿ ದಿನಾಂಕ 24.09.2024 ರಂದು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಪ್ರಕರಣದಲ್ಲಿನ 3 ಜನ ಆರೋಪಿತರಾದ 1)

ಶ್ರವಣ್‌ ಸತೀಶ ಮಿನಜಗಿ, (27), ಸೋಲಾಪುರ, ಮಹಾರಾಷ್ಟ್ರ 2)ಪ್ರದೀಪ ಮಾರುತಿ ಇಂಗ್ಲೆ (27), ಸೋಲಾಪುರ, ಮಹಾರಾಷ್ಟ್ರ, 

3)ಕಿರಣ್‌ ಬಾಲು ಚೌಹಾನ್‌(28), ಪುಣೆ, ಮಹಾರಾಷ್ಟ್ರ ಎಂಬವರನ್ನು ದಸ್ತಗಿರಿ ಮಾಡಿದ್ದು, ಅವರುಗಳ ವಶದಿಂದ ಕೃತ್ಯಕ್ಕೆ ಬಳಸಿದ MH 12 SY 2163 ನಂಬ್ರದ ಸ್ವಿಫ್ಟ್‌ ಕಾರು (ಮೌಲ್ಯ ರೂ. 4,00,000/-), 

ನಗದು ರೂ 70,000/-, 

ಮೊಬೈಲ್‌ ಫೋನ್‌ಗಳು-3, 

ವಿವಿಧ ಬ್ಯಾಂಕ್‌ಗಳ ಎಟಿಎಮ್‌ ಕಾರ್ಡ್‌ಗಳು-52 ಇವುಗಳ ಒಟ್ಟು ಮೌಲ್ಯ ರೂ. 4,85,000/ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 

ಪ್ರಕರಣದಲ್ಲಿ 4 ಜನ ಆರೋಪಿತರು ಭಾಗಿಯಾಗಿದ್ದು, ತನಿಖೆಯ ಸಮಯ ಆರೋಪಿತರು ಕುಖ್ಯಾತ ಕಳ್ಳರಾಗಿದ್ದು, ಅಂತರರಾಜ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತ ಎಟಿಎಮ್‌ನಲ್ಲಿ ಹಣ ತೆಗೆಯಲು ಬಂದ ಜನರ ಗಮನವನ್ನು ಬೇರೆಡೆ ಸೆಳೆದು ಅವರ ಎಟಿಎಮ್‌ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್‌ ನೀಡಿ ಎಟಿಎಮ್‌ನಲ್ಲಿ ಈವರೆಗೆ ಲಕ್ಷಾಂತರ ಹಣವನ್ನು ಡ್ರಾ ಮಾಡಿದ್ದು, ಅವರ ವಿರುದ್ಧ ಈ ತನಕ ಇದೇ ರೀತಿಯ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಹಾಗೂ ಹಲವು ಪ್ರಕರಣದಲ್ಲಿ ಜೈಲು ಶಿಕ್ಷೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ.