Header Ads Widget

ಮಣಿಪಾಲದ ಮದುವನದಲ್ಲೊಂದು ಪರಿಸರ ಸ್ನೇಹಿ ಗಣೇಶ


ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿಹಿರೆಬೆಟ್ಟು ಅವರು ಎಂದಿನಂತೆ ಈ ಬಾರಿಯೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಶಿಷ್ಟವಾದ ಕಲಾಕೃತಿ ಯನ್ನು ಮಣಿಪಾಲದ ಮದುವನದಲ್ಲಿ ರಚಿಸಿ ಪ್ರದರ್ಶನಕ್ಕಿಟ್ಟಿದ್ದಾರೆ. ಮಣಿಪಾಲದ ಉದ್ಯಮಿ ಶ್ರೀ ದಾಮೋದರ ನಾಯಕ್ ಅವರು ಕಲಾಕೃತಿಯನ್ನು ಅನಾವರಣಗೊಳಿಸಿ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಲಾಕೃತಿಯನ್ನು ರಚಿಸಲು ಸುಮಾರು ೨೦೦೦ ಪೆಪರ್ ಲೋಟ ಮತ್ತು ಡ್ರಾಯಿಂಗ್ ಹಾಳೆಗಳ್ಳನ್ನು ಬಳಸಿದ್ದಾರೆ. ಕಲಾಕೃತಿಯು ಸುಮಾರು ೬ ಅಡಿ ಎತ್ತರ ಇದೆ.