BREAKING
ಸಂಘ ಸಂಸ್ಥೆ

ಭಜನೆಯು ವಿಭಜನೆಯನ್ನು ತಪ್ಪಿಸುತ್ತದೆ: ರತ್ನಾವತಿ ಜೆ ಬೈಕಾಡಿ

ಶ್ರೀ ಕಾಳಿಕಾಂಬಾ ಭಜನಾ ಸಂಘ (ರಿ) ತೆಂಕನಿಡಿಯೂರು ಇವರು ಶ್ರೀ ದೇವಿ ಮಹಿಳಾ ಮಂಡಳಿ ಮತ್ತು ಬಾಲಸಂಸ್ಕಾರ ಕೇಂದ್ರದ ಸಹಯೋಗದಲ್ಲಿ ಮನೆ ಮನೆಗೆ ಭಜನೆ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಯಶಸ್ವಿ 50 ಭಜನಾ ಕಾರ್ಯಕ್ರಮಗಳನ್ನು ಪೂರೈಸಿದ ಸಂದರ್ಭದಲ್ಲಿ 51ನೇ ಭಜನಾ ಸೇವೆಯನ್ನು ಶ್ರೀದೇವಿ ಮಹಿಳಾ ಮಂಡಳಿಯ ವತಿಯಿಂದ ಶ್ರೀ ಕಾಳಿಕಾಂಬಾ ಭಜನಾ ಸಂಘದಲ್ಲಿ ಇತ್ತೀಚೆಗೆ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೈಕಾಡಿ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು ಭಜನಾ ತಂಡದ ಸದಸ್ಯರನ್ನು ಅಭಿನಂದಿಸುತ್ತಾ, “ಧಾರವಾಹಿ, ಮೊಬೈಲ್‌ ಗೀಳು ಅಂಟಿಸಿಕೊಳ್ಳುವುದಕ್ಕಿಂತ ಸಾಮೂಹಿಕ ಭಜನೆಯಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ, ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಹಕರಿಸುವ ಇಂತಹ ಅತ್ಯತ್ತಮ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯಲಿ” ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ಸುಚಿತ್ರ ಆಚಾರ್ಯ “ ಶ್ರೀ ಕಾಳಿಕಾಂಬಾ ಭಜನಾ ಸಂಘದ ಗರ್ಭಗುಡಿಯ ನಿರ್ಮಾಣ ಹಂತದಲ್ಲಿರುವ ಈ ಸಂದರ್ಭದಲ್ಲಿ ಪ್ರಮುಖ ಪ್ರಾಯೋಜಕರಾದ ಶ್ರೀ ವಾಸುದೇವ ಆಚಾರ್ಯ ಗೀತಾ ಸಾ ಮಿಲ್‌ ಮಲ್ಪೆ ಇವರೊಂದಿಗೆ ಅಳಿಲು ಸೇವೆಯಾಗಿ ಸಮಾಜ ಬಾಂಧವರ ನೆರವು ಸಂಗ್ರಹಿಸಲು ಮನೆ ಮನೆಗೆ ಭಜನೆ ಎನ್ನುವ ಕಾರ್ಯಕ್ರಮ ಆಯೋಜಿಸಿದ್ದು, ಧನಸಂಗ್ರಹಕ್ಕಿಂತ ಮಿಗಿಲಾಗಿ ಭಜನಾ ತಂಡದ ಸದಸ್ಯರಲ್ಲಿ ಆತ್ಮವಿಶ್ವಾಸ ಮೂಡಿದೆ. ಭಜನೆ ಮಾಡಿದ ಮನೆಯವರೂ ತಂಡದ ಸದಸ್ಯರನ್ನು ಆತ್ಮೀಯವಾಗಿ ಉಪಚರಿಸಿ ಭಜನಾ ಸಂಘದ ಕಟ್ಟಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಈ ಕಾರ್ಯಕ್ರಮವು ಮುಂದುವರಿಯಲಿದ್ದು ಸರ್ವರ ಸಹಕಾರ ಅಗತ್ಯ” ಎಂದರು. 

ಭಜನಾ ತಂಡದ ಸದಸ್ಯ ಶ್ರೀ ಉಮೇಶ್‌ ಜೆ ಆಚಾರ್ಯ ಮಾತನಾಡಿ “ಪ್ರತಿ ಮನೆಯಿಂದ ಭಜನಾ ಸಂಘದ ಗರ್ಭಗುಡಿ ನಿರ್ಮಾಣಕ್ಕೆ ಕೊಡುಗೆ ಇರಲಿ ಎಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಕ್ಕಳ, ಮಹಿಳೆಯರು ಮತ್ತು ಭಜನಾ ಸಂಘದ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ” ಎಂದು ಹೇಳುತ್ತಾ ಭಜನಾ ಸಂಘವನ್ನು ಕಟ್ಟಿ ಬೆಳೆಸಲು ದುಡಿದ ಹಿರಿಯರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ನಿರಂತರವಾಗಿ ಭಜನೆಯೊಂದಿಗೆ ತಬಲಾದಲ್ಲಿ ಸಹಸಕರಿಸಿದ ಕು. ಮನ್ವಿತ್‌ ಕೆ. ಆಚಾರ್ಯ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದ ಕು.ವಿಖ್ಯಾತ್‌ ಯು. ಆಚಾರ್ಯ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷ ಶ್ರೀ ಟಿ. ಕೃಷ್ಣ ಆಚಾರ್ಯ ವಹಿಸಿದ್ದು, ವೇದಿಕೆಯಲ್ಲಿ ಪ್ರಧಾನ ಅರ್ಚಕ ಶ್ರೀ ಜನಾರ್ದನ ಆಚಾರ್ಯ, ಶ್ರೀ ದೇವಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷೆ ಶ್ರೀಮತಿ ಅಪ್ಪಿ ಶಿವಯ್ಯ ಆಚಾರ್ಯ, ಅಧ್ಯಕ್ಷೆ ಶ್ರೀಮತಿ ಸುಶೀಲಾ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು. ಶ್ರೀಮತಿ ಸುಷ್ಮಾ ರಾಜೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಉದಯ ಜೆ, ಆಚಾರ್ಯ ವಂದಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!