BREAKING
ಸುದ್ದಿ

ಮಂಗಳೂರು ವಿಭಾಗ ನೈರುತ್ಯ ವಲಯಕ್ಕೆ ಸೇರ್ಪಡೆ: ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಸಂಸದರಿಗೆ ಅಭಿನಂದನೆ

ಕೋಟ ಶ್ರೀನಿವಾಸ್ ಪೂಜಾರಿಯವರು ಸಂಸದರಾದ ಬಳಿಕ ಕರಾವಳಿ ಭಾಗದ ರೈಲ್ವೆ ಸಂಚಾರ ಸಂಬಂಧಿತ ಅಭಿವೃದ್ಧಿಯು ತೀವ್ರ ಗತಿಯಿಂದ ಸಾಗುತ್ತಿದ್ದು ಇತ್ತೀಚಿಗೆ ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯ ರೈಲ್ವೆಗೆ ಸೇರ್ಪಡೆಗೊಂಡಿರುತ್ತದೆ ಹಾಗೂ ಉಡುಪಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಇಂದ್ರಾಳಿ ರೈಲ್ವೆ ಸೇತುವೆ ಲೋಕಾರ್ಪಣೆ ಗೊಂಡಿದೆ. ಇವೆಲ್ಲ ಕಾರ್ಯಗಳನ್ನು ಗುರುತಿಸಿ ಉಡುಪಿ ರೈಲ್ವೆ ಯಾತ್ರಿ ಸಂಘವು ಅಧ್ಯಕ್ಷರಾದ ದೀರಜ್ ಎನ್ ಶಾಂತಿಯವರ ನೇತೃತ್ವದಲ್ಲಿ ಮಣಿಪಾಲದ ಸಂಸದರ ಕಚೇರಿಯಲ್ಲಿ ಅವರನ್ನು ಅಭಿನಂದಿಸಿತು.

ಉಪಾಧ್ಯಕ್ಷರಾದ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ನಿರ್ದೇಶಕರಾದ ರವಿ ಪೂಜಾರಿ ಹಿರಿಯಡ್ಕ, ಸದಾನಂದ ಅಮೀನ್, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಐವನ್ ಡಿಸೋಜ ಹಾಜರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!