BREAKING
ಸುದ್ದಿ

ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಸೀರೆ ಕುಚ್ಚು ತರಬೇತಿ ಕಾರ್ಯಕ್ರಮ ಆರಂಭ

ಮಹಿಳೆಯರಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಸ್ವಾವಲಂಬನೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ಜುಬಿಲಿ ಎಜುಕೇಶನ್ ಫಂಡ್, ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಕೃಷ್ಣ ಬಾಲನಿಕೇತನ, ಕುಕ್ಕಿಕಟ್ಟೆ, ಉಡುಪಿ ಇವರ ಆಶ್ರಯದಲ್ಲಿ ಸೀರೆ ಕುಚ್ಚು ತಯಾರಿಕೆ ತರಬೇತಿ ಕಾರ್ಯಕ್ರಮವನ್ನು ಸೆ. 19ರಂದು ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಆರಂಭಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಟೌನ್ ಬ್ರಾಂಚ್, ಉಡುಪಿಯ ಮುಖ್ಯ ವ್ಯವಸ್ಥಾಪಕ ಶ್ರೀ ಸುಶ್ರುತ ಡಿ. ಶಾಸ್ತ್ರಿ ಅವರು ಮಾತನಾಡಿ, ಲಭ್ಯವಾಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳುವಂತೆ ಕರೆ ನೀಡಿದರು.

“ನಾವು ಕಲಿತುಕೊಳ್ಳುವ ಪ್ರತಿಯೊಂದು ಕೌಶಲ್ಯವೂ ತಕ್ಷಣವೇ ಉಪಯೋಗಕ್ಕೆ ಬರಬೇಕು ಎಂದೇನಿಲ್ಲ. ಆದರೆ ಮುಂದಿನ ದಿನಗಳಲ್ಲಿ ಜೀವನದ ಯಾವುದೇ ಸಂದರ್ಭದಲ್ಲಿ, ಯಾವುದೇ ಹಂತದಲ್ಲಿ ಆ ಕೌಶಲ್ಯ ನಮಗೆ ಉಪಯುಕ್ತವಾಗಬಹುದು. ಆದ್ದರಿಂದ ಸಿಗುವ ಅವಕಾಶಗಳನ್ನು ಬಳಸಿಕೊಂಡು ನಮ್ಮ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು” ಎಂಬ ಸಂದೇಶವನ್ನು ಅವರು ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ವಿ.ಎಸ್.ಪಿ.ಯು. ಕಾಲೇಜು, ಕಟಪಾಡಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮೀಬಾಯಿ, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ಶ್ರೀ ರಾಮಚಂದ್ರ ಉಪಾಧ್ಯಾಯ ಹಾಗೂ ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿಯ ಸಂಸ್ಥಾಪಕಿ ಹಾಗೂ ತರಬೇತುದಾರರಾದ ಶ್ರೀಮತಿ ರಮ್ಯ ಎ.ಸಿ. ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಬಾಲನಿಕೇತನ, ಕುಕ್ಕಿಕಟ್ಟೆಯ ಅಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಸ್ಥಿತರಿದ್ದರು.

ತರಬೇತಿ ಕಾರ್ಯಕ್ರಮದಲ್ಲಿ ಸೀರೆ ಕುಚ್ಚು ತಯಾರಿಕೆಯ ವಿವಿಧ ವಿಧಾನಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದ್ದು, ಮಹಿಳೆಯರು ಈ ಕೌಶಲ್ಯವನ್ನು ಮುಂದಿನ ದಿನಗಳಲ್ಲಿ ಸ್ವ ಉದ್ಯೋಗವಾಗಿ ರೂಪಿಸಿಕೊಳ್ಳಲು ಹಾಗೂ ಆದಾಯದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಸಹಕಾರಿಯಾಗಲಿದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!