ನೇತ್ರ ಜ್ಯೋತಿ ಕಾಲೇಜು ಉಡುಪಿ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದ ಶುಭ ಸಂದರ್ಭದಲ್ಲಿ , ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು ಇಲ್ಲಿನ ಅಧ್ಯಾಪಕರಾದ ಶ್ರೀಮತಿ ದಿವ್ಯ ಕುಮಾರಿ ಇವರನ್ನು ಸನ್ಮಾನಿಸಲಾಯಿತು. ಈ ಶುಭ ಸಂದರ್ಭದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇಲ್ಲಿನ ಪ್ರೊ ವೈಸ್ ಚಾನ್ಸಲರ್ ಆದ ಡಾಕ್ಟರ್ ಕರುಣಾಕರ್ ಕೋಟೆಗಾರ್, S R ಗ್ರೂಪ್ ಆಫ್ ಎಜುಕೇಶನ್ ಹೆಬ್ರಿ ಇಲ್ಲಿನ ಸೆಕ್ರೆಟರಿ ಆದಂತಹ ಪ್ರೊಫೆಸರ್ ಸಪ್ನಾ ಶೆಟ್ಟಿ, ಫೌಂಡರ್ ಚೇರ್ ಪರ್ಸನ್ ನೇತ್ರ ಜ್ಯೋತಿ ಕಾಲೇಜು ಉಡುಪಿ ಡಾ. ಕೃಷ್ಣಪ್ರಸಾದ್ ಕುಡ್ಲು, ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ಮ್ಯಾನೇಜಿಂಗ್ ಡೈರೆಕ್ಟರ್ ನೇತ್ರ ಜ್ಯೋತಿ ಕಾಲೇಜು ಉಡುಪಿ, ಅಧ್ಯಾಪಕವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
