ಉಡುಪಿ: ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗಾಗಿ ಸೋಮವಾರ ಒಂದು ದಿನದ ಸಾಫ್ಟ್ ಸ್ಕಿಲ್ಸ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿವಿಧ ಕ್ಷೇತ್ರಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕೆಆರ್‌ಸಿಎಲ್‌ನ ಟಿ&ಡಿ ವಿಭಾಗದ ವ್ಯವಸ್ಥಾಪಕ ಶ್ರೀಧರ ಅವಭೃತ್ ಹಾಗೂ ಆರ್‌ಎಚ್‌ಎಸ್‌ಡಿಸಿ ಕೇಂದ್ರ ಸಂಯೋಜಕಿ ಪ್ರಿಯಾ ನಾಯ್ಕ್ ರೈಲ್ವೆ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ಡಾ. ರೆನ್ ಟ್ರೆವರ್ ಡೈಸ್ ನಾಯಕತ್ವ ಗುಣಗಳ ಕುರಿತು ತರಬೇತಿ ನೀಡಿದರು. ಸಂಶೋಧನಾ ವಿದ್ಯಾರ್ಥಿನಿ ಅಕ್ಷತಾ ಶೆಟ್ಟಿ ಪರಿಣಾಮಕಾರಿ ಸಂವಹನ ಕಲೆ ಕುರಿತು ಮಾತನಾಡಿದರು.
ಡಾ. ಮಿಥುನ್ ಎಸ್. ಉಳ್ಳಾಲ್, ಲಿಖಿತ್ ಕುಮಾರ್ ಪರಿಣಾಮಕಾರಿ CV ಸಿದ್ಧಪಡಿಸುವುದು ಹಾಗೂ ಸಂದರ್ಶನ ಎದುರಿಸುವ ತಂತ್ರಗಳ ಕುರಿತು ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್, ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ರಾಜೇಂದ್ರ ಕೆ ಮತ್ತು ಕಾಲೇಜಿನ ಉದ್ಯೋಗ ನೇಮಕಾತಿ ಅಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು.
