BREAKING
ಸುದ್ದಿ

ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ

ಕಲ್ಯಾಣಿ ಕಲಾಕೇಂದ್ರ (ರಿ.) ಸುಬ್ರಹ್ಮಣ್ಯನಗರ ಉಡುಪಿ ಇದರ ಶ್ರಾವಣ ಮಾಸದ ವಿಶೇಷ ಕಲಾ ಕಾರ್ಯಕ್ರಮ "ಗಮಕ ವಾಚನ ವ್ಯಾಖ್ಯಾನ" ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ದಿನಾಂಕ 22-8-2026 ಶನಿವಾರದಂದು ಸಂಜೆ ನಡೆಯಿತು.

ಪ್ರಸಿದ್ಧ ಗಮಕ ವ್ಯಾಖ್ಯಾನಕಾರರಾದ ಡಾ.ರಾಘವೇಂದ್ರ ರಾವ್ ಉಡುಪಿ ಮತ್ತು ಗಮಕ ವಾಚಕರಾದ ಶ್ರೀಮತಿ ಪಲ್ಲವಿ ಕೆದ್ಲಾಯ ಬ್ರಹ್ಮಾವರ ಇವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಕ್ರವರ್ತಿ ದಿಲೀಪನ ಕಥೆಯನ್ನೊಳಗೊಂಡ "ಸತ್ತ್ವಪರೀಕ್ಷೆ " ಎಂಬ ಕಥಾಭಾಗವನ್ನು ನಿರೂಪಿಸಿದರು.

ಸುಮಧುರ ಕಂಠಸಿರಿಯ ಭಾವಪೂರ್ಣ ವಾಚನ ಹಾಗೂ ಸುಸ್ಪಷ್ಟ ಮತ್ತು ಅತ್ಯಾಕರ್ಷಕ ಪ್ರಬುದ್ಧ ವ್ಯಾಖ್ಯಾನ ಶೈಲಿ ಪ್ರೇಕ್ಷಕರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿ ಒಂದು ಸಾರ್ಥಕ ಕಾರ್ಯಕ್ರಮವೆನಿಸಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಕಲಾಕೇಂದ್ರದ ಕೋಶಧಿಕಾರಿ ಆದ್ಯತಾ ಭಟ್ ಪ್ರಾರ್ಥನೆ ಮಾಡಿ ಶ್ರೀಮತಿ ಪಲ್ಲವಿ ಯವರ ವ್ಯಕ್ತಿಪರಿಚಯ ಮಾಡಿದರು. ಅಧ್ಯಕ್ಷರಾದ ನಿರಂಜನ್ ಭಟ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ರಾಘವೇಂದ್ರ ರಾವ್ ರವರನ್ನು ಪರಿಚಯಿಸಿದರು. ಉಪಾಧ್ಯಕ್ಷರಾದ ಶ್ರೀ ವೆಂಕಟಕೃಷ್ಣ ಭಟ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ದೇವಳದ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಉಪಾಧ್ಯ ಮತ್ತು ಶ್ರೀ ಶ್ರೀಕಾಂತ ಉಪಾಧ್ಯರವರು ಸ್ಥಳಾವಕಾಶ ನೀಡಿ ಸಹಕರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೇಕ್ಷಕರು ಕಲಾಕೇಂದ್ರದ ಕಲಾಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!