Header Ads Widget

ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ


ಯಾವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 62 ಕೋಟಿ ರೂ. ಕೊಟ್ಟರೆ ಮುಡಾದ 14 ನಿವೇಶನಗಳನ್ನು ವಾಪಸ್‌ ಕೊಡುತ್ತೇನೆ ಎಂಬ ಮಾತು ಬಂತೋ ಆಗಲೇ ಅವರ 45 ವರ್ಷದ ರಾಜಕೀಯ ಜೀವನವೇ ಅಂತ್ಯವಾಯಿತು ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ನೀವು 14 ನಿವೇಶನಗಳನ್ನು ವಾಪಸ್‌ ಕೊಟ್ಟರೆ ಇಡೀ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತದೆ. ಯಾರೆಲ್ಲ ಅಕ್ರಮವಾಗಿ ನಿವೇಶನ ಪಡೆದಿದ್ದಾರೋ ಎಲ್ಲವೂ ಹೊರಗೆ ಬರುತ್ತವೆ ಎಂಬುದಾಗಿ ನಾನು ಸಿಎಂಗೆ ಹೇಳಿದ್ದೆ. ಅದಕ್ಕೆ 62 ಕೋಟಿ ಕೊಟ್ಟರೆ ವಾಪಸ್‌ ಕೊಡುತ್ತೇನೆ ಎಂದಿದ್ದರು. ಯಾವಾಗ ಅವರ ಬಾಯಿಂದ ಆ ಮಾತು ಬಂತೋ ಆಗಲೇ ಅವರ ರಾಜಕೀಯ ಜೀವನ ಅಂತ್ಯವಾಯಿತು ಎಂದರು. ಸಿದ್ದರಾಮಯ್ಯ ಮಾತುಗಳು ಅವರ ಪ್ರಾಮಾಣಿಕತೆಯನ್ನೇ ಸುಳ್ಳಾಗಿಸಿದವು. ಈಗ ಕೇಸ್‌ಗೆ ಕೌಂಟರ್‌ ಕೇಸ್‌ ಎಂದು ಹೇಳುತ್ತಿದ್ದಾರೆ. ಈಗ ಭ್ರಷ್ಟಾಚಾರದ ಆರೋಪ ಸಿದ್ದರಾಮಯ್ಯ ಕುತ್ತಿಗೆಗೇ ಬಂದಿದೆ. ಸಿಎಂ ಕುರ್ಚಿಯೇ ಹೋಗುವ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲೂ ಅವರು ಧಮ್ಕಿ ಹಾಕುತ್ತಿದ್ದಾರೆ. ಯಾರ್ಯಾರ ಮೇಲೆ ಕೇಸ್‌ ಹಾಕುತ್ತೀರೋ ಹಾಕಿ ನೋಡೋಣ. ರಾಜ್ಯದ ಜನ ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ಮುಕ್ತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದರು.