ಪಿಪಿಸಿಯಲ್ಲಿ ವಿಜ್ಞಾನ ಸಂಘದ ಉದ್ಘಾಟನೆ

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನೆ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಪೂರ್ಣಪ್ರಜ್ಞ ಸಮೂಹಸಂಸ್ಥೆಗಳ ಆಡಳಿತಾಧಿಕಾರಿಗಳಾಗಿರುವ ಡಾ. ಎ.ಪಿ.ಭಟ್ ಉಪಸ್ಥಿತರಿದ್ದರು. 


ಪ್ರಭಾರ ಪ್ರಾಂಶುಪಾಲರಾದ ಡಾ.ರಮೇಶ್.ಟಿಎಸ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಸಂಯೋಜಕರಾದ ಡಾ.ಸಂತೋಷ್ ಕುಮಾರ್ ಕೆ ಉಪಸ್ಥಿತರಿದ್ದು ಅಭ್ಯಾಗತರನ್ನು ಸ್ವಾಗತಿಸಿದರು.
 
ಉದ್ಘಾಟನಾ ಭಾಷಣಕಾರರಾಗಿ ಮಂಗಳೂರು ವಿ.ವಿ ಯ ಜೀವವಿಜ್ಞಾನ ವಿಭಾಗದ   ಪ್ರೋ. ಪ್ರಶಾಂತ್ ನಾಯಕ್ ಭಾಗವಹಿಸಿ "ಪವರ್ ಆಫ್ ಸೈನ್ಸ್ ಇನ್ ಎವರೀಡೇ ಲೈಫ್ ಅನ್ಲಾಕಿಂಗ್ ದ ವಂರ‍್ಸ್ ಆರೋಂಡ್ ಅಸ್" ವಿಷಯದ ಕುರಿತು ಮಾತನಾಡಿದರು. ವಿದ್ಯಾರ್ಥಿ ಸಂಚಾಲಕಿ ಮಿಸ್ ಸಹನ ದೀಪ್ತಿ ಇವರು ನಿರೂಪಿಸಿ ವಂದಿಸಿದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು