Header Ads Widget

ಬಾರಕೂರು ಕಾಲೇಜು: ಕನಕದಾಸ ಜಯಂತಿ ದಿನಾಚರಣೆ

ಬಾರಕೂರು : ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ ರ‍್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎನ್ ಎಸ್ ಎಸ್, ರೋವರ್ ರೇಂರ‍್ಸ್ ಹಾಗೂ ಕನ್ನಡ ವಿಭಾಗ ಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ ವತಿಯಿಂದ ಕನಕದಾಸ ಜಯಂತಿಯ ಪ್ರಯುಕ್ತ ಕನಕ ಕರ‍್ತನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಎಸ್. ಭಾಸ್ಕರ ಶೆಟ್ಟಿ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಬಿ.ಬಿ.ಎಂ.ಪಿ ಬೆಂಗಳೂರಿನ ಹೆಚ್ಚುವರಿ ಆಯುಕ್ತಾರಾದ ಶ್ರೀ ಅಜಿತ್ ಕುಮಾರ್ ಹೆಗ್ಡೆ, ಶಾನಾಡಿ ಅವರು ಮಾತಾಡಿ, ಕನಕದಾಸರ ಜೀವನ ಚರಿತ್ರೆ ಹಾಗೂ ಕನಕ ಕರ‍್ತನೆಯ ಪ್ರಾಮುಖ್ಯತೆ ಬಗ್ಗೆ ಮನವರಿಕೆ ಮಾಡಿ, ಜಯಂತಿಗಳ ಆಚರಣೆಯ ಮಹತ್ವವನ್ನು ತಿಳಿಸಿದರು. ಶ್ರೀ ರಾಜೇಶ್ ಶಾನುಭೋಗ್ ಹಾಗೂ ಬಳಗದವರಿಂದ ಕನಕ ಕರ‍್ತನೆ ಗೀತ ಗಾಯನ ಕರ‍್ಯಕ್ರಮವನ್ನು ನೆರೆವೇರಿಸಲಾಯಿತು.

ರೋಟರಿ ಬರ‍್ಕೂರು ಇವರ ವತಿಯಿಂದ ವಿದ್ಯರ‍್ಥಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ಕಾಲೇಜಿನ ಉಪನ್ಯಾಸಕರಾದ ಸತೀಶ್ ಬಿ ಡಿ, ವಿದ್ಯಾ ಪಿ, ಶ್ರೀದೇವಿ, ಗ್ರಂಥಪಾಲಕ ಹರೀಶ್ ಸಿ ಕೆ, ಕನಕದಾಸ ಅಧ್ಯಯನ ಪೀಠದ ಸಿಬ್ಬಂದಿ ರ‍್ಗ ಮೊದಲಾದವರು ಈ ಸಂರ‍್ಭದಲ್ಲಿ ಉಪಸ್ಥಿತರಿದ್ದರು. ವೈಶಿಷ್ಟ ಪರ‍್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಸುಮಾರು ೭೫ ವಿದ್ಯರ‍್ಥಿಗಳು ಭಾಗವಹಿಸಿ, ಪ್ರಯೋಜನವನ್ನು ಪಡೆದುಕೊಂಡರು.

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಂಶೋಧನ ಕೇಂದ್ರ, ಮಾಹೆಯ ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಎನ್.ಎಸ್.ಎಸ್ ನ ಯೋಜನಾಧಿಕಾರಿ ರಾಧಾಕೃಷ್ಣನ್ ನಾಯಕ್ ರವರು ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಶೈಲಜಾ ಕಾರ್ಯಕ್ರಮವನ್ನು ನಿರೂಪಿಸಿದರು.