BREAKING
ಸುದ್ದಿ

ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಯವರ ಜನ್ಮದಿನವನ್ನು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘಟನೆ,ಉಡುಪಿ ಘಟಕ ದ ವತಿಯಿಂದ ಸಂಸ್ಥಾಪಕರ ದಿನವನ್ನಾಗಿ ನವೆಂಬರ್ 19 ರಂದು ಉಡುಪಿಯ ಹಿಂದಿ ಪ್ರಚಾರ ಸಮಿತಿಯ ಸಭಾಂಗಣದಲ್ಲಿ ಆಚರಿಸಲಾಯಿತು.

ಶ್ರೀ ಪ್ರದೀಪ ಆರ್ ಭಕ್ತ ರವರು ಸಮಾರಂಭದ ಅಧ್ಯ್ಷತೆಯನ್ನು ವಹಿಸಿದ್ದರು.

ಪ್ರಾರ್ಥನೆಯ ಬಳಿಕ ಶ್ರೀ ಸುಧೀಂದ್ರ ಭಂಡಾರಿ ಯವರು ಸ್ವಾಗತಿಸಿದರು.ನಂತರ ದೀಪಬೆಳಗಿಸಿ ಸಂಸ್ಥಾಪಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯ್ತು.

 ಶ್ರೀ ಮಾರುತಿ ಪ್ರಭು ರವರು ಸುಬ್ಬರಾವ್ ಪೈಯವರ ಜೀವನಚರಿತ್ರೆಯ ಕುರಿತು ಮಾತನಾಡಿದರು.ಶ್ರೀ ಮೋಹನದಾಸ ನಾಯಕ್ ರವರು ಸಂಘಟನೆಯು ಕಳೆದ ಹತ್ತು ವರ್ಷಗಳಿಂದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಿಗೆ ರೂ 12.25 ಲಕ್ಷ ವೆಚ್ಚದಲ್ಲಿ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.

 ಈ ಸಂದರ್ಭದಲ್ಲಿ ನಂಚಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆಟೋಟ ಸಾಮಗ್ರಿಗಳನ್ನು ಹಾಗು ಹೊಳೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ ಕಿಟ್ ಗಳನ್ನು ವಿತರಿಸಲಾಯಿತು.ಇದರೊಂದಿಗೆ ಸಂಸ್ಥಾಪಕರ ಜೀವನಚರಿತ್ರೆ ಆಧಾರಿತ ಪುಸ್ತಕವನ್ನೂ ನೀಡಲಾಯ್ತು. ಈ ಎರಡೂ ಶಾಲೆಯ ಮುಖ್ಯೋಪಾಧ್ಯಾಯಿನಿಯರು ಶಾಲಾ ಮಕ್ಕಳ ಅವಶ್ಯಕ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಸಂಘಟನೆಯ ಸಹಕಾರವನ್ನು ಶ್ಲಾಘಿಸಿದರು.

 ಶ್ರೀ ಯೋಗೀಶ್ ಭಟ್ ರವರು ಸದಸ್ಯರ ಅನುಕೂಲಕ್ಕಾಗಿ ಸಂಘಟನೆಯ ಸ್ವಯಂಸೇವಕರು ಮಾಡುತ್ತಿರುವ ನಿಸ್ವಾರ್ಥಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. 

 ಅಧ್ಯಕ್ಷ ಶ್ರೀ ಪ್ರದೀಪ ಭಕ್ತರು ಶಿಕ್ಷಕರು ಗ್ರಾಮೀಣ ಶಾಲೆ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗಳನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಮುತುವರ್ಜಿ ವಹಿಸಬೇಕೆಂದು ನುಡಿದರು.

 ಶ್ರೀ ಮಾರುತಿ ಪ್ರಭು ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕೊನೆಯಲ್ಲಿ ಶ್ರೀ ಸುಧೀಂದ್ರ ಭಂಡಾರಿಯವರು ವಂದಿಸಿದರು. ಸಂಘಟನೆಯ ಸದಸ್ಯರು,ಸಹಸದಸ್ಯರು ಉಪಸ್ಥಿತರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!