ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರ ೬ ನೆ ಕನ್ನಡ ಸಾಹಿತ್ಯ ಸಮ್ಮೇಳನ  "ನೆಲದುಲಿ" ಕಾರ್ಯಕ್ರಮವು ಕಾಪು ತಾಲೂಕಿನ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕ ಡಾ.ಗಣೇಶ್ ಗಂಗೊಳ್ಳಿ ಅವರ ನಿರ್ದೇಶನದಲ್ಲಿ  ಕಾಲೇಜು ಮತ್ತು ಪ್ರೌಢ ಶಾಲಾರಿಂದ ಕನ್ನಡದ ಪ್ರಸಿದ್ಧ ಕವಿಗಳ ಕನ್ನಡದ ಗೀತೆಗಳ ಕಾರ್ಯಕ್ರಮ ಜರುಗಿತು,


 ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಉಜ್ವಿತ, ಶಪಾ,ಜಯಶ್ರೀ , ಅಸ್ಪಾನಾ , ಕೃಷ್ಣವೇಣಿ, ನಿಷ್ಮ, ಹರ್ಷಿತಾ, ರಶ್ಮಿ, ರೇಷ್ಮಾ, ಅಶ್ಮಿತಾ , ರಮಿತಾ , ಚೈತನ್ಯ , ಇಕ್ರ, ರಿಶಾ , ಆಜ್ಮಾ, ತಸ್ಲೀಮಾಬಾನು, ಅಮ್ರೀನಾ , ಸಮೀಕ್ಷಾ , ಶಮಿಮಾ, ನಿಧಿ, ಆಫೀಫಾ , ಅಕ್ಷಿತಾ, ರಿಹಾ ಇವರು ಕನ್ನಡದ ನಾಡು ನುಡಿಗೆ ಸಂಬಂಧ ಪಟ್ಟ ಹಾಡುಗಳನ್ನು ಹಾಡಿ ನೆರೆದ ಸಭಿಕರನ್ನು ರಂಜಿಸಿದರು.


ಕಾಲೇಜು ವಿಭಾಗದ ಪ್ರಾಂಶುಪಾಲರು ಮತ್ತು ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಸಹಕಾರ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು