ಉಡುಪಿ ತುಳು ಕೂಟ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುಳು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ತುಳು ಮಿನದನ- 2024 ಕಾರ್ಯಕ್ರಮ ಕಲ್ಯಾಣ ಪುರ ಮಿಲಾಗ್ರಿಸ್ ಕಾಲೇಜ್, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ, ಜೈ ತುಳುನಾಡು ಸಂಘಟನೆ, ರೋಟರಿ ಕ್ಲಬ್ ಕಲ್ಯಾಣಪುರ ಸಹಯೋಗದಲ್ಲಿ ನ.30ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆಯಲಿದೆ. ತುಳು ಭಾಷೆ ಸಂಸ್ಕೃತಿಗೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸ್ಪರ್ಧಾವಿಜೇತರಿಗೆ ಬಹುಮಾನ ಸಹಿತ, ಸುಮನಾ ಮಾದವ ಶೆಟ್ಟಿ ಕುಕ್ಕೆಹಳ್ಳಿ ಸಮಗ್ರ ಚಾಂಪಿಯನ್ಶಿಪ್ ಪುರಸ್ಕಾರಗಳನ್ನು ನೀಡಲಾಗುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯದ ಆಸಕ್ತ ಕಾಲೇಜುಗಳು ತಮ್ಮ ಭಾಗವಹಿಸುವಿಕೆಗಾಗಿ ತುಳು ಮಿನದನ ಸಂಚಾಲಕರಾದ ಡಾ. ಯಾದವ್ ವಿ ಕರ್ಕೇರ ಮೊಬೈಲ್ ಃ 9449102026 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.